ಬೀದರ್ | ಚಲಿಸುತ್ತಿದ್ದ ವಾಹನದಿಂದ ಬಿದ್ದು ಶಾಲಾ ವಿದ್ಯಾರ್ಥಿ ಮೃತ್ಯು

Update: 2025-01-02 04:07 GMT

ಬೀದರ್: ಚಲಿಸುತ್ತಿದ್ದ ವಾಹನವೊಂದರಿಂದ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟು, ಇನ್ನೋರ್ವ ವಿದ್ಯಾರ್ಥಿ ಗಾಯಗೊಂಡಿರುವ ಘಟನೆ ಬಸವಕಲ್ಯಾಣ ತಾಲೂಕಿನ ಹಾಮುನಗರ್ ತಾಂಡಾದಲ್ಲಿ ನಡೆದಿದೆ.

ಹಾಮುನಗರ ತಾಂಡಾದ ನಿವಾಸಿ ಕವಿಕುಮಾರ್ ರಾಠೋಡ್ ಎಂಬವರ ಪುತ್ರ ಕೈಲಾಸ್(14) ಮೃತಪಟ್ಟ ವಿದ್ಯಾರ್ಥಿ.

ಕೈಲಾಸ್ 7ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದ. ಈತ ಹಾಮುನಗರ ತಾಂಡಾದಿಂದ ಮುಡಬಿ ಗ್ರಾಮಕ್ಕೆ ಶಾಲೆಗೆ ಕ್ರೂಸರ್ ವಾಹನದಲ್ಲಿ ತೆರಳುತ್ತಿದ್ದನು. ಈ ವೇಳೆ ವಾಹನದ ಹಿಂಬಾಗಿಲು ಹಠಾತ್ ತೆರೆದ ಕಾರಣ ಕೆಳಗಡೆ ಬಿದ್ದ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನೊಬ್ಬ ವಿದ್ಯಾರ್ಥಿ ದಿಲ್ಶಾನ್ ಎಂಬಾತ ಗಾಯಗೊಂಡಿದ್ದಾನೆ.

ಈ ಘಟನೆಗೆ ಸಂಬಂಧಿಸಿದಂತೆ ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News