ಬೀದರ್ | ಅಮಿತ್ ಶಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ, ಗಡಿಪಾರು ಮಾಡಲು ಒತ್ತಾಯ

Update: 2024-12-19 15:14 GMT

ಬೀದರ್ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಅಂಬೇಡ್ಕರ್ ಅವರಿಗೆ ಅವಹೇಳನ ಮಾಡಿದ್ದರಿಂದ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ವಜಾಗೊಳಿಸಿ, ದೇಶದ್ರೋಹದಡಿ ಪ್ರಕರಣ ದಾಖಲಿಸಿ, ದೇಶದಿಂದ ಗಡಿಪಾರು ಮಾಡಬೇಕು ಎಂದು ವಿವಿಧ ದಲಿತ ಸಂಘಟನೆಗಳು ಒತ್ತಾಯಿಸಿವೆ.

ಹುಮನಾಬಾದ್ ನಗರದಲ್ಲಿ ದಲಿತ ಸಂಘಟನೆಗಳ ನೇತೃತ್ವದಲ್ಲಿ ಅಮಿತ್ ಶಾ ವಿರುದ್ಧ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಭಾರತೀಯ ಜನತಾ ಪಕ್ಷದವರು ಅಂಬೇಡ್ಕರ್ ರವರನ್ನು ನಿರಂತರವಾಗಿ ವಿರೋಧ ಮಾಡುತ್ತೆಲೆ ಬಂದಿದ್ದಾರೆ. ಅಮಿತ್ ಶಾ ಅವರ ಹೇಳಿಕೆ ಸಂವಿಧಾನ ವಿರುದ್ಧವಾಗಿದೆ. ಅವರು ಆರ್.ಎಸ್.ಎಸ್. ನವರ ಇಚ್ಛೆಯಿಂತೆ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಮನುಸ್ಮೃತಿ ತರುವ ತವಕದಲ್ಲಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಭೀಮ್ ಆರ್ಮಿಯ ಅಧ್ಯಕ್ಷ ಅನೀಲ್ ಎಂ.ದೊಡ್ಡಿ, ಭೀಮ್ ಆರ್ಮಿಯ ಅಲ್ಪಾಸಂಖ್ಯಾತರ ಉಪಾಧ್ಯಕ್ಷ ತೈಯಬ್ ನಂದನ್, ಎಸ್.ಡಿ.ಪಿ.ಐ ಅಧ್ಯಕ್ಷ ಶೇಖ್ ಮಕೂದ್, ಮನೋಜಕುಮಾರ್ ಜಾನವೀರ್, ಎಂ.ಡಿ.ಬಾಬ್ ಪಟೇಲ್, ಡಿ ಎಸ್ ಎಸ್ ತಾಲೂಕು ಅಧ್ಯಕ್ಷ ಸೋಮಶೇಖರ್ ಡಾಂಗೆ, ಯುವರಾಜ್ ಐಹೋಳ್ಳಿ, ರಾಹುಲ್ ಮೇಟಿ, ಶಶಿಕಾಂತ ಡಾಂಗೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News