ಬೀದರ್ | ಎಸೆಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಎಸ್ಪಿ ಪ್ರದೀಪ್ ಗುಂಟಿ ಭೇಟಿ, ಪರಿಶೀಲನೆ
Update: 2025-03-21 17:34 IST

ಬೀದರ್ : ಇಂದು ಎಸೆಸೆಲ್ಸಿ ಪರೀಕ್ಷೆಯು ಪ್ರಾರಂಭವಾಗಿದ್ದು, ಪರೀಕ್ಷೆಯ ಕೇಂದ್ರವಾದ ಲಕ್ಷ್ಮೀಬಾಯಿ ಕಮಠಾಣೆ ಹಾಗೂ ಜಿಜಾಮಾತಾ ಶಾಲೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಭೇಟಿ ನೀಡಿ ವೀಕ್ಷಣೆ ಮಾಡಿದರು.
ಇಂದು ಪ್ರಥಮ ಭಾಷೆಯಾದ ಕನ್ನಡ ಪತ್ರಿಕೆ ಪರೀಕ್ಷೆಯ ಸಮಯದಲ್ಲಿ ಪರೀಕ್ಷೆಯ ಸಮಯದಲ್ಲಿ ಪ್ರದೀಪ್ ಗುಂಟಿ ಅವರು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ, ಪರೀಕ್ಷೆಯು ಸುಸೂತ್ರವಾಗಿ ನಡೆಯುತ್ತಿರುವುದರ ಬಗ್ಗೆ ಪರಿಶೀಲನೆ ನಡೆಸಿದರು.
ಜಿಲ್ಲಾದಾದ್ಯಂತ 10ನೇ ತರಗತಿಯ ಪರೀಕ್ಷೆಯು ಸುಸೂತ್ರವಾಗಿ ನಡೆದಿದೆ ಎಂದು ತಿಳಿದು ಬಂದಿದೆ.