ಬೀದರ್ | ಮಾದಕ ವ್ಯಸನಕ್ಕೆ ವಿದ್ಯಾರ್ಥಿಗಳು ಬಲಿ : ಡಾ.ಧ್ಯಾನೇಶ್ವರ ನೀರಗುಡೆ

Update: 2024-11-18 15:25 GMT

ಬೀದರ್‌ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನಿಂದ ನ.28 ರಿಂದ ಡಿ.6 ರವರೆಗೆ ರಾಜ್ಯಾದ್ಯಂತ ನಡೆಯಲಿರುವ ನಶೆಮುಕ್ತ ಅಭಿಯಾನದಬ ಪೋಸ್ಟರನ್ನು ಡಾ.ಧ್ಯಾನೇಶ್ವರ ನೀರಗುಡೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಬಿಡುಗಡೆಗೊಳಿಸಿದರು.

ಡಾ.ಧ್ಯಾನೇಶ್ವರ ನೀರಗುಡೆ ಮಾತನಾಡಿ, ಭಾರತ ತನ್ನದೇ ಘನತೆ, ವೈಶಿಷ್ಟತೆ, ಗೌರವ ಆಚರಣೆ ಹಾಗೂ ಸದ್ವಿಚಾರ ಹೊಂದಿದ ದೇಶ. ಹೀಗಾಗಿ ಶತಮಾನಗಳಿಂದ ಇನ್ನಿತರ ದೇಶಗಳಿಗೆ ಮಾರ್ಗದರ್ಶನ, ಶಿಕ್ಷಣ, ಕೌಶಲ್ಯ ಹಾಗೂ ಉತ್ತಮ ವ್ಯಕ್ತಿಗಳನ್ನು ನೀಡುತ್ತಲೇ ಇದೆ. ವಿದೇಶಗಳಲ್ಲಿ ನಮ್ಮ ದೇಶದ ಯುವಕರು ದೊಡ್ಡ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಇತ್ತೀಚೆಗೆ ಸಂಸತ್ತಿನ ಸ್ಥಾಯಿ ಸಮಿತಿಯೊಂದು ನೀಡಿದ ವರದಿ ಪ್ರಕಾರ ಮಾದಕ ವಸ್ತುಗಳ ಪೂರೈಕೆಯ ಜಾಲದ ಟಾರ್ಗೆಟ್ ಶಾಲಾ ಕಾಲೇಜು ವಿದ್ಯಾರ್ಥಿಗಳೇ ಆಗಿದ್ದಾರೆ.

ಅಪ್ರಾಪ್ತ ವಯಸ್ಸಿನ, ಮುಖ್ಯವಾಗಿ 10-17 ವಯೋಮಾನದ ವಿದ್ಯಾರ್ಥಿಗಳೇ ಬಹುದೊಡ್ಡ ಪ್ರಮಾಣದಲ್ಲಿ ವ್ಯಸನಕ್ಕೆ ತುತ್ತಾಗುತ್ತಿದ್ದಾರೆ. ಪಂಜಾಬ್, ಹರ್ಯಾಣ, ಅಸ್ಸಾಂ, ಆಂಧ್ರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ದಿಲ್ಲಿ, ಮಹಾರಾಷ್ಟ್ರ ಮೊದಲಾದ ರಾಜ್ಯಗಳು ಅಪಾಯಕಾರಿ ಪ್ರಮಾಣದಲ್ಲಿ ಮಾದಕ ವ್ಯಸನಕ್ಕೆ ತುತ್ತಾಗುತ್ತಿದೆ.

ಈ ಸಮಸ್ಯೆಯನ್ನು ಕೇವಲ ವ್ಯಕ್ತಿಗಳ ನೈತಿಕ ಅಧಃಪತನದ ಪ್ರಕರಣಗಳು ಎಂದಷ್ಟೇ ಪರಿಗಣಿಸದೆ, ರಾಷ್ಟ್ರದ ಭದ್ರತೆಯ ಸವಾಲು, ಭವಿಷ್ಯದ ಪೀಳಿಗೆಗಳನ್ನು ವ್ಯವಸ್ಥಿತವಾಗಿ ನಾಶ ಮಾಡುವ ಸಂಚು ಎಂದು ಹೇಳಿದರು.

ಡಾ.ಸಂತೋಷಕುಮಾರ ಹಂಗರಗಿ ಮಾತನಾಡಿ, ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದರೆ ಕೇವಲ ಭಾರತೀಯ ಯುವಕ ಯುವತಿಯರಿಗೆ ತಾತ್ಕಾಲಿಕ ಉನ್ಮಾದ ಉಂಟುಮಾಡುವ ಕಾರ್ಯಾಚರಣೆಯಾಗದೆ ದೇಶವನ್ನೇ ನಿಶ್ಯಕ್ತಗೊಳಿಸುವ ಅಂತರ್ರಾಷ್ಟ್ರೀಯ ಸಂಚಿನ ಭಾಗವಾಗಿದೆ ಎಂದು ಶಂಕೆ ವ್ಯಕ್ತಪಡಿಸಿದರು. ಯುವಕರನ್ನೇ ಗುರಿಯಾಗಿಸಿಕೊಂಡ ವ್ಯವಸ್ತಿತ ಸಂಚು ಇದು ಎಂದು ಅರಿಯದ ಹೊರತು ಪರಿಹಾರ ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಡಾ.ರಾಜಶೇಖರ್ ಪಾಟೀಲ್, ಆಒಔ ಡಾ.ಕಿರಣ ಪಾಟೀಲ್, ಡಾ.ಅನಿಲ್ ಚಿಂತಾಮಣಿ ಆಖಿಔ, ಡಾ.ದಿಲೀಪ್ ಡೊಂಗ್ರೆ ಈಒಔ, ಶಿವಶಂಕರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೇಮಂತ ,ನಾಗರಾಜ ನಗರ ಸಹ ಕಾರ್ಯದರ್ಶಿ ಪವನ್ ಪಾಂಚಳ, ನಿಂಗುದೇವ ಗುತ್ತಿ ,ಶಿವಶರಣ ಚಾಂಬಳ ಮುಂತಾದವರು ಇದ್ದರು

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News