ಬೀದರ್ | ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ : ಮಹಾಲಿಂಗ ಮಹಾಸ್ವಾಮಿ

Update: 2025-03-21 17:10 IST
Photo of Program
  • whatsapp icon

ಬೀದರ್ : ಪ್ರಸ್ತುತ ಸಮಯದಲ್ಲಿ ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದು ಮಹಾಲಿಂಗ ಮಹಾಸ್ವಾಮಿ ಅವರು ಅಭಿಪ್ರಾಯಪಟ್ಟರು.

ನಗರದ ಡಾ.ಚನ್ನಬಸವ ಪಟ್ಟದೇವರ ಪ್ರಸಾದ ನಿಲಯದ ಭವನದಲ್ಲಿ ಅಕ್ಕಮಹಾದೇವಿ ಮಹಿಳಾ ಸಾಂಸ್ಕೃತಿಕ ಸಂಘದ ವತಿಯಿಂದ ಗುರುವಾರ ಸಂಜೆ ಜರುಗಿದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ವಚನ ಸಂಗೀತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಯಿಯು ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರ, ಪ್ರೀತಿ-ವಾತ್ಸಲ್ಯ ಮಮತೆಯಿಂದ ಬೆಳೆಸಿದರೆ ಮುಂದೆ ಮಕ್ಕಳು ದೇಶದ ಉತ್ತಮ ಪ್ರಜೆಯಾಗುತ್ತಾರೆ. ಆದರೆ ಇಂದು ಸಾಫ್ಟವೇರ್ ಇಂಜಿನೀಯರ್‌ ಮಕ್ಕಳು ಮನೆಯಲ್ಲಿ ಅಶಾಂತಿ ನಿರ್ಮಾಣ ಮಾಡುತ್ತಿದ್ದಾರೆ. ಅದೇ ರೀತಿಯಾಗಿ ಸಂಸ್ಕಾರಯುತ ಮನೆಗಳು ಕೂಡ ಸಾಫ್ಟವೇರ್ ಮಕ್ಕಳಿಂದ ಮನೆಯಲ್ಲಿ ಒಡಕು ಮೂಡುತ್ತಿದೆ ಎಂದರು.

ಹಿರಿಯ ಸಾಹಿತಿ ಪ್ರೊ.ಭಾಗೀರಥಿ ಕೊಂಡರ ಅವರು ಮಾತನಾಡಿ, ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಸ್ವಾತಂತ್ರ, ಸಮಾನತೆ, ಸಹೋದರತೆ ತಂದು ಕೊಟ್ಟಿ ಅವರ ಬದುಕು ಕಟ್ಟಿಕೊಳ್ಳಲು ಬಸವಣ್ಣನವರು ಮಾಡಿರುವ ಬಹುದೊಡ್ಡ ಕಾರ್ಯವಾಗಿದೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಇಡೀ ಜಗತ್ತಿನಲ್ಲಿ ಆಚರಿಸಲು ಕಾರಣವೇನೆಂದರೆ, ಮಹಿಳೆಯನ್ನು ಸಬಲೆಯನ್ನಾಗಿ ಮಾಡುವುದಾಗಿದೆ. ಸಮಾಜದಲ್ಲಿಯ ಲಿಂಗ ತಾರತಮ್ಯ ಹೊಗಲಾಡಿಸಿ, ಮಹಿಳೆಯರ ಸಮಸ್ಯೆಗಳನ್ನು ದೂರ ಮಾಡುವುದಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಕುಂತಲಾ ಬೆಲ್ದಾಳೆ, ಡೈಯಟ್ ಕಾಲೇಜಿನ ಉಪನ್ಯಾಸಕಿ ಗೀತಾ ಗಡ್ಡಿ, ಸಾಹಿತಿ ಧನಲಕ್ಷ್ಮೀ ಪಾಟೀಲ್, ಅಕ್ಕಮಹಾದೇವಿ ಮಹಿಳಾ ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ಮೀನಾಕ್ಷಿ ಪಾಟೀಲ್, ಶ್ರೀಕಾಂತ್ ಬಿರಾದಾರ್, ಉಮಾಕಾಂತ್ ಮೀಸೆ, ಮಹಾದೇವಿ ಬಿರಾದಾರ್, ಮಾಲಾಶ್ರೀ ಗುರುನಾಥ್, ಜಗದೇವಿ ನಾಗರಾಳೆ, ವಿಜಯಲಕ್ಷ್ಮಿ ಹುಗ್ಗೆಳ್ಳಿ ಹಾಗೂ ಶ್ರೀಕಾಂತ್ ಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News