ಲೋಕಸಭಾ ಅಧಿವೇಶನದಲ್ಲಿ ಉದ್ಯೋಗ, ವಲಸೆ ಬಗ್ಗೆ ಗಮನ ಸೆಳೆದ ಬೀದರ್‌ನ ಯುವ ಸಂಸದ ಸಾಗರ್ ಖಂಡ್ರೆ
Update: 2024-12-16 16:19 GMT
ಬೀದರ್ : ಇಂದು ಲೋಕಸಭೆಯ ಅಧಿವೇಶನದಲ್ಲಿ ಬೀದರ್ ಲೋಕಸಭಾ ಕ್ಷೇತ್ರದ ಯುವ ಸಂಸದ ಸಾಗರ್ ಖಂಡ್ರೆ ಪ್ರಸ್ತಾಪಿಸಿದ ವಿಚಾರ ಜನರ ಗಮನ ಸೆಳೆದಿದೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆಯವರ ಪುತ್ರ ಸಾಗರ್ ಖಂಡ್ರೆ, ಇದೇ ಮೊದಲ ಬಾರಿಗೆ ಚುನಾವಣೆ ಗೆದ್ದು ಲೋಕಸಭೆ ಪ್ರವೇಶಿಸಿದ್ದು, ಇಂದು ಲೋಕಸಭೆ ಅಧಿವೇಶನದಲ್ಲಿ ತಮ್ಮ ಮೊದಲ ವಿಚಾರ ಮಂಡಿಸಿದ್ದಾರೆ.
ಉದ್ಯೋಗ ಸಮಸ್ಯೆಯ ಬಗ್ಗೆ ಮಾತನಾಡಿದ ಬೀದರ್ ನ ಸಂಸದ ಸಾಗರ್ ಖಂಡ್ರೆ, ಇತರ ರಾಜ್ಯಗಳಿಗೆ ಉದ್ಯೋಗ ವಲಸೆ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಉದ್ಯೋಗಾವಕಾಶಗಳ ವಿಷಯವನ್ನು ಪ್ರಸ್ತಾಪಿಸಿದರು. ಆದರೆ ಕಾರ್ಮಿಕ ಮತ್ತು ಉದ್ಯೋಗ ಸಚಿವರಿಂದ ಈ ಪ್ರಶ್ನೆಗೆ ನಿರೀಕ್ಷಿತ ಪ್ರತಿಕ್ರಿಯೆ ಲಭ್ಯವಾಗಲಿಲ್ಲ.
ಅನುಭವದ ಕೊರತೆಯಿದ್ದರೂ ಸಹ, ಗಂಭೀರ ವಿಚಾರದ ಬಗ್ಗೆ ಅಧ್ಯಯನ ಮಾಡಿ ಸದನದ ಗಮನ ಸೆಳೆಯುವ ಪ್ರಯತ್ನ ಮಾಡಿದ ಸಾಗರ ಖಂಡ್ರೆ ಅವರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.