ಹುಮನಾಬಾದ್ ಪುರಸಭೆ, ರಾಜೇಶ್ವರ ಗ್ರಾಮ ಪಂಚಾಯತಿಯನ್ನು ಮೇಲ್ದರ್ಜೆಗೇರಿಸಲು ಕ್ರಮ : ಸಚಿವ ರಹೀಂ ಖಾನ್

Update: 2025-03-18 20:10 IST
ಹುಮನಾಬಾದ್ ಪುರಸಭೆ, ರಾಜೇಶ್ವರ ಗ್ರಾಮ ಪಂಚಾಯತಿಯನ್ನು ಮೇಲ್ದರ್ಜೆಗೇರಿಸಲು ಕ್ರಮ : ಸಚಿವ ರಹೀಂ ಖಾನ್

ರಹೀಂ ಖಾನ್

  • whatsapp icon

ಬೆಂಗಳೂರು : ಬೀದರ್ ಜಿಲ್ಲೆಯ ಹುಮನಾಬಾದ್ ಪುರಸಭೆಯನ್ನು ನಗರಸಭೆಯನ್ನಾಗಿ ಮತ್ತು ರಾಜೇಶ್ವರ ಗ್ರಾಮ ಪಂಚಾಯತಿಯನ್ನು ಪಟ್ಟಣ ಪಂಚಾಯಿತಿಗಳನ್ನಾಗಿ ಮೇಲ್ದರ್ಜೆಗೇರಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಈ ಬಗ್ಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಪೌರಾಡಳಿತ ರಹೀಂ ಖಾನ್ ತಿಳಿಸಿದ್ದಾರೆ.

ಮಂಗಳವಾರ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಭೀಮಾರಾವ್ ಬಸವರಾಜ ಪಾಟೀಲ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆಯಾ ಪ್ರದೇಶದ ಜನಸಂಖ್ಯೆಯ ಆಧಾರದ ಮೇಲೆ ಮೇಲ್ದರ್ಜೆಗೆ ಏರಿಸಲಾಗುವುದು. ಆದರೆ, ಹುಮನಾಬಾದ್ ಮತ್ತು ರಾಜೇಶ್ವರದಲ್ಲಿ ನಿಗದಿಪಡಿಸಿರುವ ಜನಸಂಖ್ಯೆ ಇಲ್ಲದ ಕಾರಣ ಮೇಲ್ದರ್ಜೆಗೆ ಏರಿಸಲು ಸಾಧ್ಯವಾಗುತ್ತಿಲ್ಲ. ಆದಗ್ಯೂ ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದರು.

2011ರ ಜನಗಣತಿಯನ್ವಯ ಹುಮನಾಬಾದ್ ಪುರಸಭೆಯಲ್ಲಿ 44,483 ಮತ್ತು ರಾಜೇಶ್ವರ ಗ್ರಾಮ ಪಂಚಾಯತಿಯಲ್ಲಿ 11,179 ಜನಸಂಖ್ಯೆ ಇರುತ್ತದೆ. ಪೌರಸಭೆಗಳ ಅಧಿನಿಯಮ 1964 ರಲ್ಲಿನ ಮಾನದಂಡಗಳನ್ವಯ ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರದೇಶದಲ್ಲಿ 2011ರ ಜನಗಣತಿಯನ್ವಯ 50,000 ಕ್ಕಿಂತ ಹೆಚ್ಚು ಜನಸಂಖ್ಯೆ ಇರಬೇಕಾಗುತ್ತದೆ. ಪಟ್ಟಣ ಪಂಚಾಯತಿಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರದೇಶದಲ್ಲಿ 10,000 ದಿಂದ 20,000 ಜನಸಂಖ್ಯೆ ಇರಬೇಕಾಗಿದ್ದು, 2025ರ ಸಚಿವ ಸಂಪುಟ ನಿರ್ಣಯದಂತೆ 15,000ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮ ಪಂಚಾಯತಿಗಳನ್ನು ಮೇಲ್ದರ್ಜೆಗೇರಿಸಲು ಪರಿಗಣಿಸಲಾಗುತ್ತದೆ ಎಂದು ರಹೀಂ ಖಾನ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News