ಬಿಸಿಲು ನಾಡು ಬೀದರ್‌ನಲ್ಲಿ ಧಾರಾಕಾರ ಮಳೆ, ತಂಪಾದ ಭೂಮಿ
Update: 2025-03-23 17:46 IST

ಬೀದರ್ : ಈ ತಿಂಗಳಲ್ಲಿ ಸದಾ ಸುಡು ಬಿಸಿಲಿನಿಂದ ಕೂಡಿರುತ್ತಿದ್ದ ಬೀದರ್ ಜಿಲ್ಲೆಯಲ್ಲಿ ಇಂದು ಧಾರಾಕಾರ ಮಳೆ ಸುರುದು ತಂಪು ವಾತಾವರಣ ಸೃಷ್ಟಿ ಮಾಡಿತ್ತು.
ಜಿಲ್ಲೆಯಲ್ಲಿ ಇಂದು ಮುಂಜಾನೆಯಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಸಂಜೆ ಸುಮಾರು 4 ಗಂಟೆಗೆ ನಗರದ ಹೊರವಲಯದಲ್ಲಿರುವ ಅಷ್ಟೂರ್ ಸೇರಿದಂತೆ ವಿವಿಧ ಕಡೆಗೆ ಗುಡುಗು, ಮಿಂಚು ಸಹಿತ ಮಳೆಯಾಗಿದೆ. ಇದರಿಂದಾಗಿ ಸುಡು ಬಿಸಿಲಿನಿಂದ ಬೇಸತ್ತ ಜನರಿಗೆ ಸ್ವಲ್ಪ ತಂಪಾದ ವಾತಾವರಣ ನಿರ್ಮಾಣವಾಗಿದೆ. ಹಾಗೆಯೇ ರೈತರಲ್ಲಿ ಒಳ್ಳೆ ರೀತಿಯ ಮುಂಗಾರು ಮಳೆಯ ಭರವಸೆ ಮೂಡಿದೆ.
ಮಾರ್ಚ್ ತಿಂಗಳಿಂದ ಮೇ ತಿಂಗಳವರೆಗೆ ಸದಾ 35 ಡಿಗ್ರಿ ಯಿಂದ 40 ಕ್ಕಿಂತ ಹೆಚ್ಚು ಡಿಗ್ರಿ ಸೆಲ್ಸಿಯಸ್ ತಾಪಮಾನ ಹೊಂದಿರುವ ಈ ಪ್ರದೇಶದಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಿ ಜನರಿಗೆ ಸ್ವಲ್ಪ ಮಟ್ಟಿಗೆ ತಂಪಿನ ಖುಷಿ ನೀಡಿದೆ. ಹೀಗಾಗಿ ಬಿಸಿಲಿನಿಂದ ಬೇಸತ್ತ ಜನ ಒಂಚೂರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ ಎಂದು ಹೇಳಬಹುದು.