ಪ್ಯಾರಾಲಿಂಪಿಕ್ಸ್‌ | ಪುರುಷರ ಜಾವೆಲಿನ್ ಥ್ರೋನಲ್ಲಿ ಬೆಳ್ಳಿಯಿಂದ ಚಿನ್ನಕ್ಕೆ ಜಿಗಿದ ನವದೀಪ್ ಸಿಂಗ್

Update: 2024-09-07 19:56 GMT

Photo : x/@RajavYadav2

ಪ್ಯಾರಿಸ್ : ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಶನಿವಾರ ನಡೆದ ಪುರುಷರ ಜಾವೆಲಿನ್ ಥ್ರೋ ಎಫ್41 ಫೈನಲ್‌ನಲ್ಲಿ ಇರಾನ್‌ನ ಬೀತ್ ಸಯಾಹ್ ಸಡೆಗ್ ಅನರ್ಹಗೊಂಡ ನಂತರ ಭಾರತದ ನವದೀಪ್ ಸಿಂಗ್ ಅವರಿಗೆ ಬೆಳ್ಳಿ ಪದಕದ ಬದಲು ಚಿನ್ನದ ಪದಕ ಒಲಿದಿದೆ.

ಪುರುಷರ ಜಾವೆಲಿನ್ ಎಫ್41 ವಿಭಾಗದಲ್ಲಿ ಭಾರತಕ್ಕೆ ಇದು ಮೊದಲ ಚಿನ್ನದ ಪದಕವಾಗಿದೆ.

ಫೌಲ್‌ನೊಂದಿಗೆ ಸ್ಪರ್ಧೆಯನ್ನು ಪ್ರಾರಂಭಿಸಿ, ಮೂರು ವರ್ಷಗಳ ಹಿಂದೆ ಟೋಕಿಯೊ ಕ್ರೀಡಾಕೂಟದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಹರಿಯಾಣದ 23 ವರ್ಷದ ಪ್ಯಾರಾ-ಅಥ್ಲೀಟ್, ತನ್ನ ಎರಡನೇ ಪ್ರಯತ್ನದಲ್ಲಿ 46.39 ಮೀಟರ್ ಎಸೆದು ಎರಡನೇ ಸ್ಥಾನ ಪಡೆದರು.

47.32 ಮೀಟರ್‌ಗಳ ದೂರ ಎಸೆಯುವಿಕೆಯೊಂದಿಗೆ, ನವದೀಪ್ ಪ್ಯಾರಾಲಿಂಪಿಕ್ ದಾಖಲೆಯನ್ನು ಮುರಿದು ಮುನ್ನಡೆ ಸಾಧಿಸಿದರು. ಇರಾನಿನ ಸಡೆಗ್ ತಮ್ಮ ಐದನೇ ಪ್ರಯತ್ನದಲ್ಲಿ 47.64 ಮೀಟರ್‌ಗಳ ದಾಖಲೆಯ ಪ್ರಯತ್ನದೊಂದಿಗೆ ಚಿನ್ನವನ್ನು ಪಡೆದಿದ್ದರು.

ಆದರೆ, ಫೈನಲ್‌ನ ಬಳಿಕ ಇರಾನ್‌ನ ಸಡೆಗ್ ಅವರನ್ನು ಅನರ್ಹಗೊಳಿಸಲಾಯಿತು. ಇದು ಭಾರತದ ಅಥ್ಲೀಟ್ ನವದೀಪ್ ಗೆ ಚಿನ್ನದ ಪದಕಕ್ಕೆ ಕೊರಳೊಡ್ಡುವಂತೆ ಮಾಡಿತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News