ಕೊಳ್ಳೇಗಾಲ | ಕೆರೆಗೆ ಕಾರು ಬಿದ್ದು ಇಬ್ಬರು ಮೃತ್ಯು: ಓರ್ವನ ರಕ್ಷಣೆ
Update: 2025-01-02 05:27 GMT
ಚಾಮರಾಜನಗರ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ದುರ್ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕುಂತೂರು ಕೆರೆಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಶುಭ ಮತ್ತು ಊರ್ಜಿತ್ ಮೃತಪಟ್ಟವರು. ಕಾರಿನಲ್ಲಿದ್ದ ಮನಿತ್ ಎಂಬ ಯುವಕನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಇವರು ಮೈಸೂರು ನಿವಾಸಿಗಳಾಗಿದ್ದು, ಮೈಸೂರಿನಲ್ಲಿ ಟೆಲಿ ಕಾಲರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಹೊಸ ವರ್ಷದ ದಿನದಂದು ಈ ಮೂವರು ಮಲೆ ಮಹದೇಶ್ವರ ದರ್ಶನಕ್ಕೆಂದು ಮೈಸೂರಿನಿಂದ ಕಾರಿನಲ್ಲಿ ಆಗಮಿಸಿದ್ದರು. ಬುಧವಾರ ರಾತ್ರಿ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ಕುಂತೂರು ಕೆರೆಗೆ ಬಿದ್ದಿದೆ. ಕೆರೆಯ ನೀರಲ್ಲಿ ಕಾರು ಮುಳುಗಿದ್ದರಿಂದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಬಗ್ಗೆ ಚಾಮರಾಜನಗರ ಜಿಲ್ಲೆಯ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.