ಚಿಕ್ಕಮಗಳೂರು | ನೀರು ಸೇದುವಾಗ ಬಾವಿಗೆ ಬಿದ್ದ 94 ವರ್ಷದ ವೃದ್ದೆಯನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
Update: 2024-12-02 16:24 GMT
ಚಿಕ್ಕಮಗಳೂರು : ಬಾವಿಯಿಂದ ನೀರು ಸೇದುವಾಗ ಆಯತಪ್ಪಿ ಆಳದ ಬಾವಿಗೆ ಬಿದ್ದ 94ವರ್ಷದ ವೃದ್ದೆಯನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿದ್ದಾರೆ.
ಜಿಲ್ಲೆಯ ಕೊಪ್ಪ ತಾಲೂಕು ಮರಕಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ವೃದ್ದೆ ಕಮಲಾ ಅವರನ್ನು ಹಗ್ಗದ ಸಹಾಯದಿಂದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿದ್ದಾರೆ. ತೀವ್ರ ಅಸ್ತಸ್ಥಗೊಂಡಿದ್ದ ವೃದ್ದೆಯನ್ನು ಕೊಪ್ಪ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನಿಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಮನೆಯ ಸಮೀಪದಲ್ಲಿನ ಬಾವಿಯಲ್ಲಿ ನೀರು ಸೇದರಲು ವೃದ್ದೆ ತೆರಳಿದ್ದ ವೇಳೆ ಆಯತಪ್ಪಿ ಬಾವಿಗೆ ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣ ಕುಟುಂಬದವರು ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಗಳು ಹಗ್ಗದ ಸಹಾಯದಿಂದ ವೃದ್ದೆಯನ್ನು ಸುರಕ್ಷಿತವಾಗಿ ಮೇಲೆತ್ತಿದ್ದಾರೆ.