ಚಿಕ್ಕಮಗಳೂರು: ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಬಿಇಒ ಕಚೇರಿ ಸಿಬ್ಬಂದಿ

Update: 2024-01-08 07:49 GMT

ಚಿಕ್ಕಮಗಳೂರು: ನಿವೃತ್ತ ಮುಖ್ಯ ಶಿಕ್ಷಕನಿಂದ ಲಂಚ ಪಡೆಯುತ್ತಿದ್ದ ವೇಳೆ ಬೀರೂರು ಬಿಇಒ ಕಚೇರಿ ದ್ವಿತೀಯ ದರ್ಜೆ ಸಹಾಯಕ ಚಂದ್ರಶೇಖರ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ತರೀಕೆರೆ ತಾಲೂಕು ಹೊಸಗಂಗೂರು ಶಾಲೆಯಲ್ಲಿ ಶಿಕ್ಷಕರಾಗಿ ನಿತೃತ್ತಿ ಹೊಂದಿದ, ಎನ್.ಪರಮೇಶ್ ತಮ್ಮ ನಿವೃತ್ತಿ ನಂತರ ಸರ್ಕಾರದಿಂದ ಬರಬೇಕಾದ ಜಿ.ಪಿ.ಎಫ್, ಜಿಐಎಸ್ ಪಡೆದುಕೊಳ್ಳಲು ಬಿಇಒ ಕಚೇರಿಗೆ ತೆರಳಿದ ವೇಳೆ 40 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ.

ನೀವು ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆ ಉಳಿಸಿಕೊಂಡಿದ್ದೀರಿ ಅದರ ಬಾಕಿ ಇದೆ. ಅದನ್ನು ಸರಿ ಮಾಡಿಕೊಡುತ್ತೇನೆ. ಬಂದ ಹಣದಲ್ಲಿ ಅರ್ಧಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾನೆ.

ದ್ವಿತಿಯ ದರ್ಜೆ ಸಹಾಯಕ ಚಂದ್ರಶೇಖರ ಮುಖ್ಯ ಶಿಕ್ಷಕನಿಂದ 40ಸಾವಿರ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಇನ್ಸ್ ಪೇಕ್ಟರ್ ಅನಿಲ್ ರಾಥೋಡ್ ನೇತೃತ್ವದ ಸಿಬ್ಬಂದಿಗಳ ತಂಡ  ದಾಳಿ ನಡೆಸಿ ದ್ವಿತೀಯ ದರ್ಜೆ ಸಹಾಯಕ ಚಂದ್ರಶೇಖರ್ ನನ್ನು ಬಂಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News