ಚಿಕ್ಕಮಗಳೂರು | ವಿದ್ಯುತ್ ತಂತಿ ಸ್ಪರ್ಶಿಸಿ ಒಂಟಿ ಸಲಗ ಮೃತ್ಯು

Update: 2024-11-09 13:10 GMT

ಚಿಕ್ಕಮಗಳೂರು : ವಿದ್ಯುತ್ ತಂತಿ ಸ್ಪರ್ಶದಿಂದ ಕಾಡಾನೆಯೊಂದು ಮೃತಪಟ್ಟಿರುವ ಘಟನೆ ತಾಲೂಕಿನ ಆಲ್ದೂರು ಪೊಲೀಸ್ ಠಾಣೆಯ ತುಡುಕೂರು ಗ್ರಾಮದಲ್ಲಿ ಶನಿವಾರ ವರದಿಯಾಗಿದೆ.

ಕೆಲ ದಿನಗಳಿಂದ 17 ಕಾಡಾನೆಗಳ ಗುಂಪು ಮೂಡಿಗೆರೆ, ಆಲ್ದೂರು ಭಾಗದ ಅರಣ್ಯದಂಚಿನ ಗ್ರಾಮಗಳಲ್ಲಿರುವ ಕಾಫಿ ತೋಟಗಳಿಗೆ ದಾಳಿ ಮಾಡುತ್ತಿದ್ದು, ಗುರುವಾರ ಹಾಗೂ ಶುಕ್ರವಾರ ರಾತ್ರಿ ವೇಳೆ ಆಲ್ದೂರು ಸಮೀಪದ ತುಡುಕೂರು ಗ್ರಾಮ ಕಾಫಿ ತೋಟಗಳಲ್ಲಿ ಈ ಕಾಡಾನೆಗಳ ಗುಂಪು ಸಂಚರಿಸುತ್ತಿತ್ತು. ಕಾಡಾನೆಗಳ ಸಂಚಾರದಿಂದಾಗಿ ಸುತ್ತಮುತ್ತಲಿನ ಕಾಫಿ ತೋಟಗಳ ಮಾಲಕರು, ರೈತರು, ಕಾರ್ಮಿಕರು, ಗ್ರಾಮಸ್ಥರು ಭೀತಿಗೊಳಗಾಗಿದ್ದರು.

ಶನಿವಾರ ತುಡಕೂರು ಗ್ರಾಮದಲ್ಲಿರುವ ಕಾಫಿ ಎಸ್ಟೇಟ್ಗೆ ನುಗ್ಗಿದ್ದ ಕಾಡಾನೆಗಳ ಗುಂಪಿನಲ್ಲಿದ್ದ ಒಂಟಿ ಸಲಗವೊಂದು ತೋಟದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆಲ್ದೂರು, ಮೂಡಿಗೆರೆ ಭಾಗದಲ್ಲಿ ಕಾಡಾನೆಗಳ ಹಾವಳಿ ಮತ್ತೆ ತೀವ್ರಗೊಂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾಡಾನೆಗಳು ಎಲ್ಲೆಂದರಲ್ಲಿ ಸಂಚಾರ ಮಾಡುತ್ತಿವೆ. ಪರಿಣಾಮ ಗ್ರಾಮೀಣ ಭಾಗದ ಜನತೆ ಹಾಗೂ ರೈತರು ಪ್ರಾಣಭೀತಿಯಲ್ಲಿ ದಿನ ಕಳೆಯುವಂತಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News