ಖ್ಯಾತ ಗಾಯಕ ಪಂಕಜ್‌ ಉಧಾಸ್‌ ನಿಧನ

Update: 2024-02-26 11:24 GMT

ಪಂಕಜ್‌ ಉಧಾಸ್‌ (Photo:instagram)

ಹೊಸದಿಲ್ಲಿ: ಖ್ಯಾತ ಗಾಯಕ, ಪದ್ಮ ಶ್ರೀ ಪ್ರಶಸ್ತಿ ವಿಜೇತ ಪಂಕಜ್‌ ಉಧಾಸ್‌ ಇಂದು ನಿಧನ ಹೊಂದಿದ್ದಾರೆ. ʼಚಿಟ್ಟಿ ಆಯಿ ಹೈʼ, ʼಚಾಂದ್‌ ಜೈಸ ರಂಗ್‌ʼನಂತಹ ಗಝಲ್‌ಗಳನ್ನು ಹಾಡಿ ಖ್ಯಾತಿ ಪಡೆದಿದ್ದ ಪಂಕಜ್‌ ಉಧಾಸ್‌ ದೀರ್ಘ ಸಮಯದಿಂದ ಅಸೌಖ್ಯದಿಂದ ಬಳಲುತ್ತಿದ್ದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.

ಅವರ ನಿಧನದ ಸುದ್ದಿಯನ್ನು ಅವರ ಪುತ್ರಿ ನಯಾಬ್‌ ಉಧಾಸ್‌ ಅವರು ಇನ್‌ಸ್ಟಾಗ್ರಾಂ ಮೂಲಕ ತಿಳಿಸಿದ್ದಾರೆ.

ಹಿಂದಿ ಸಿನಿಮಾ ಹಾಗೂ ಭಾರತೀಯ ಪಾಪ್‌ ಸಂಗೀತಕ್ಕೆ ಗಣನೀಯ ಕೊಡುಗೆ ನೀಡಿದ್ದ ಪಂಕಜ್‌ ಉಧಾಸ್‌ ಅವರು 1980 ರಲ್ಲಿ ತಮ್ಮ ಗಝಲ್‌ ಆಲ್ಬಂ “ಆಹತ್” ನಿಂದ ಖ್ಯಾತಿಯ ಶಿಖರವೇರಿದ್ದರು. ನಂತರ “ಮುಕರರ್‌,” “ತರನಂ,” “ಮೆಹ್ಫಿಲ್”‌ ಹೀಗೆ ಒಂದಾದ ಒಂದರಂತೆ ಹಿಟ್‌ ಆಲ್ಬಂಗಳನ್ನು ನೀಡಿದ್ದರು.

“ನಾಮ್” ಸಿನಿಮಾದ “ಚಿಟ್ಟಿ ಆಯೀ ಹೈ” ಅವರಿಗೆ ಬಹಳಷ್ಟು ಜನಪ್ರಿಯತೆ ನೀಡಿದ್ದವು. ಭಾರತ ಸರ್ಕಾರ ಅವರಿಗೆ 2006ರಲ್ಲಿ ಪದ್ಮ ಶ್ರೀ ನೀಡಿ ಗೌರವೊಇಸಿತ್ತು.

1990ರಲ್ಲಿ ಘಾಯಲ್‌ ಚಿತ್ರಕ್ಕಾಗಿ ಲತಾ ಮಂಗೇಶ್ಕರ್‌ ಜೊತೆಗಿನ ಅವರ ಯುಗಳ ಗೀತೆ “ಮಹಿಯಾ ತೇರಿ ಕಸಂ,” 1994ರಲ್ಲಿ ಮೊಹ್ರಾ ಸಿನಿಮಾಕ್ಕಾಗಿ ಸಾಧನಾ ಸರ್ಗಂ ಜೊತೆಗೆ ಅವರು ಹಾಡಿದ “ನ ಕಜ್ರೇ ಕಿ ಧರ್”‌ ಜನಪ್ರಿಯವಾಗಿದ್ದವು.

ಸಾಜನ್‌, ಯೇ ದಿಲ್ಲಗಿ, ಫಿರ್‌ ತೇರಿ ಕಹಾನಿ ಯಾದ್‌ ಆಯೀ ಮುಂತಾದ ಸಿನಿಮಾಗಳಿಗೂ ಅವರು ಹಿನ್ನೆಲೆ ಗಾಯಕರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News