ಆಳ್ವಾಸ್ ಕಾಲೇಜು ಮೂಡಬಿದ್ರೆ, ಪೂರ್ಣ ಪ್ರಜ್ಞಾ ಕಾಲೇಜು ಉಡುಪಿ, ವಿವೇಕಾನಂದ ಕಾಲೇಜು ಪುತ್ತೂರು ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತ ಸ್ಥಾನಮಾನ
ಮಂಗಳೂರು, ಅ.4;ಆಳ್ವಾಸ್ ಕಾಲೇಜು ಮೂಡಬಿದ್ರೆ, ಪೂರ್ಣ ಪ್ರಜ್ಞಾ ಕಾಲೇಜು ಉಡುಪಿ, ವಿವೇಕಾನಂದ ಕಾಲೇಜು ನೆಹರೂ ನಗರ ಪುತ್ತೂರು ವಿದ್ಯಾಸಂಸ್ಥೆ ಗಳಿಗೆ ಸ್ವಾಯತ್ತ ಸ್ಥಾನಮಾನ ನೀಡಲು ಶೈಕ್ಷಣಿಕ ಮಂಡಳಿ ಸಭೆ ಅನುಮೋದಿಸಿದೆ ಎಂದು ಕುಲಪತಿ ಪ್ರೊ.ಜಯರಾಜ್ ಅಮೀನ್ ತಿಳಿಸಿದ್ದಾರೆ.
ಮಂಗಳೂರು ವಿಶ್ವ ವಿದ್ಯಾನಿಲಯದ ರಾಣಿ ಅಬ್ಬಕ್ಕ ಸಭಾಂಗಣದಲ್ಲಿಂದು ಹಮ್ಮಿ ಕೊಂಡಿದ್ದ 2023-24 ನೇ ಸಾಲಿನ ದ್ವಿತೀಯ ಶೈಕ್ಷಣಿಕ ಮಂಡಳಿಯ ಸಾಮಾನ್ಯ ಸಭೆಯ ಅಧ್ಯಕ್ಷ ತೆ ವಹಿಸಿ ಅವರು ಮಾತನಾ ಡುತ್ತಿದ್ದರು.
ಮಂಗಳೂರು ವಿಶ್ವ ವಿದ್ಯಾನಿಲಯದ ಸಂಯೋಜಿತ ಅರ್ಹ ಕಾಲೇಜುಗಳಿಗೆ ಸ್ವಾಯತ್ತ ಸ್ಥಾನಮಾನ ನೀಡುವ ಹಿನ್ನಲೆ ಯಲ್ಲಿ ಮೂರು ಶಿಕ್ಷಣ ಸಂಸ್ಥೆ ಗಳಿಗೆ ಈ ಸ್ಥಾನ ಮಾನ ನೀಡಲು ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ಮಂಡಿಸಿ ಅನುಮೋದಿ ಸಲಾಯಿತು ಮತ್ತು ಈ ಬಗ್ಗೆ ಸರಕಾರಕ್ಕೆ ವರದಿ ಕಳುಹಿಸಲು ನಿರ್ಧರಿಸಲಾಯಿತು.
ಮಂಗಳೂರು ವಿಶ್ವ ವಿದ್ಯಾನಿಲಯದ ಪದವಿ ಕಾರ್ಯ ಕ್ರಮಗಳಲ್ಲಿ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ ವನ್ನು ಪ್ರಾರಂಭಿಸಲು ಧ್ಯಾನ್ ಚಂದ್ ಅಕಾಡೆಮಿ ಕಲಾಟ್ರಸ್ಟ್ ಇವರಿಂದ ಸ್ವೀಕರಿಸಲಾದ ಪ್ರಸ್ತಾವನೆಯ ಹಿನ್ನೆಲೆಯಲ್ಲಿ ತಜ್ಞರ ಸಮಿತಿ ರಚನೆಯ ಬಳಿಕ ರಾಷ್ಟ್ರೀಯ ಶಿಕ್ಷಣ ನೀತಿ 2000ರ ಮಾದರಿಯಲ್ಲಿ ಪಠ್ಯ ಕ್ರಮ ರೂಪಿಸಿ ಕಲಾ ನಿಕಾಯದ ಅನು ಮೋದನೆ ಪಡೆದು ಇಂದು ನಡೆದ ಶೈಕ್ಷಣಿಕ ಮಂಡಳಿಯ ಸಭೆಗೆ ಮಂಡಿಸಿದ ಬಳಿಕ ಸಭೆ ಅನುಮೋದಿಸಿತು.
ಶೈಕ್ಷಣಿಕ ವರ್ಷ 2023-24ನೆ ಸಾಲಿಗೆ ಅಳವಡಿಸಬೇಕಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ 2000ದ ಪ್ರಕಾರ ಅಧ್ಯಯನ ಮಂಡಳಿ ತಯಾರಿಸಿರುವ ಪದವಿ ಪಠ್ಯ ಕ್ರಮ ಗಳಿಗೆ ಸಭೆ ಅನುಮೋದಿಸಿತು.
ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಇತಿಹಾಸ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ.ಉದ ಯ ಬಾರ್ಕೂರ್ ಅವರ ನಿಧನಕ್ಕೆ ಮೌನ ಪ್ರಾರ್ಥನೆ ಯ ಮೂಲಕ ಸಂತಾಪ ಸೂಚಿಸ ಲಾಯಿತು.
ಸಭೆಯವೇದಿಕೆಯಲ್ಲಿ ಮಂಗಳೂರು ವಿವಿ ಕುಲಸಚಿವ ರಾಜು ಕೆ, ಪರೀಕ್ಷಾಂಗ ಕುಲಸಚಿವ ಪ್ರೊ.ರಾಜು ಚಲ್ಲಣ್ಣ ನವರ್, ಹಣಕಾಸು ಅಧಿಕಾರಿ ಪ್ರೊ.ವೈ. ಸಂಗಪ್ಪ ಉಪಸ್ಥಿತ ರಿದ್ದರು.