ಮಂಗಳೂರು: ಫೆ. 9ರಂದು ಫಾದರ್ ಮುಲ್ಲರ್ ಆಸ್ಪತ್ರೆಯಿಂದ ರಕ್ತದಾನ, ಕೇಶದಾನ ಶಿಬಿರ

Update: 2024-02-06 09:39 GMT

ಮಂಗಳೂರು, ಫೆ.6: ವಿಶ್ವಕ್ಯಾನ್ಸರ್ ದಿನ ಮತ್ತು ವಿಶ್ವ ಮಕ್ಕಳ ಕ್ಯಾನ್ಸರ್ ದಿನದ ಅಂಗವಾಗಿ ಫೆ.9ರಂದು ರಕ್ತದಾನ ಶಿಬಿರ, ಕೇಶದಾನ ಅಭಿಯಾನ ಮತ್ತು ಮುಲ್ಲರ್ ಕ್ಯಾನ್- ಸರ್ವೈವ್ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಫಾದರ್ ಮುಲ್ಲರ್ ಚಾರಿಟೆಬಲ್ ಇನ್‌ಸ್ಟಿಟ್ಯೂಷನ್ಸ್ ನಿರ್ದೇಶಕ ರೆ. ಫಾ. ರಿಚರ್ಡ್ ಎ. ಕುವೆಲ್ಲೋ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಫಾದರ್ ಮುಲ್ಲರ್ ಆಂಕಾಲಜಿ ಸೆಂಟರ್ (ಮೆಡಿಕಲ್, ಸರ್ಜಿಕಲ್ ಆಂಕಾಜಿ ಮತ್ತು ರೇಡಿಯೋಥೆರಪಿ) ಮತ್ತು ಪೀಡಿಯಟ್ರಿಕ್ ಹೆಮೆಟೋ ಆಂಕಾಲಜಿ ವತಿಯಿಂದ ಭಾರತೀಯ ಕ್ಯಾನ್ಸರ್ ಸೊಸೈಟಿ ಮತ್ತು ಇಮ್ಯುನೋ ಹೆಮಟಾಲಜಿ ಮತ್ತು ಬ್ಲಡ್ ಟ್ರಾನ್ಸ್‌ಫ್ಯೂಷನ್ ವಿಭಾಗದ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಪಂಪ್‌ವೆಲ್‌ನ ಫಾದರ್ ಮುಲ್ಲರ್ ಕನ್ವನ್ಶನ್ ಸೆಂಟರ್ ಮಿನಿಹಾಲ್‌ನಲ್ಲಿ ಬೆಳಗ್ಗೆ 9ರಿಂದ ರಕ್ತದಾನ ಶಿಬಿರ ಮತ್ತು ಕೇಶದಾನ ಅಭಿಯಾನ ಆಯೋಜಿಸಲಾಗಿದೆ. ಸಂಜೆ 3.30ಕ್ಕೆ ಮುಖ್ಯ ಸಭಾಂಗಣದಲ್ಲಿ ಮುಲ್ಲರ್ ಕ್ಯಾನ್- ಸರ್ವೈವ್ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಯಾಗಿ ನಟ ದೇವದಾಸ್ ಕಾಪಿಕಾಡ್ ಅವರು ಭಾಗವಹಿಸಲಿದ್ದಾರೆ. ಈ ವೇಳೆ ದೇಹದಾನ, ಅಂಗಾಗ ದಾನ ಮಾಡಿದ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ಸಮ್ಮಾನ, ಕ್ಯಾನ್ಸರ್ ತಡೆಗಟ್ಟುವ ಬಗ್ಗೆ ತಜ್ಞರಿಂದ ಮಾಹಿತಿ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 5 ಗಂಟೆಗೆ ದೇವದಾಸ್ ಕಾಪಿಕಾಡ್ ಅವರ ನಿರ್ದೇಶನದ ನಾಯಿದ ಬೀಲ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.

ಆರೋಗ್ಯ ಶಿಬಿರ:

ಕ್ಯಾನ್ಸರ್ ದಿನದ ಅಂಗವಾಗಿ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಇನ್ ಹೌಸ್ ಹೆಲ್ತ್ ಕ್ಯಾಂಪ್‌ನಲ್ಲಿ ಫೆ.29ರ ವರೆಗೆ ಬೆಳಗ್ಗೆ 9ರಿಂದ 4.30ರ ತನಕ ತಪಾಸಣೆ ಮತ್ತು ಸಮಾಲೋಚನೆಯಲ್ಲಿ ಶೇ.50ರಷ್ಟು ರಿಯಾಯಿತಿ ದೊರೆಯಲಿದೆ ಎಂದರು.

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ರೆ. ಫಾ. ಅಜಿತ್ ಬಿ.ಮಿನೇಜಸ್, ಡೀನ್ ಡಾ. ಆ್ಯಂಟನಿ ಸಿಲ್ವನ್ ಡಿಸೋಜಾ, ಮೆಡಿಕಲ್ ಆಂಕಾಲಜಿ ವಿಭಾಗದ ಡಾ. ನಿಶಿತಾ ಶೆಟ್ಟಿ, ರೇಡಿಯೇಶನ್ ಆಂಕಾಲಜಿ ವಿಭಾಗದ ಡಾ. ರಜಿಶಾ, ಸರ್ಜಿಕಲ್ ಆಂಕಾಲಜಿ ವಿಭಾಗದ ಡಾ. ರೋಹನ್ ಗಟ್ಟಿ ಮತ್ತು ಪೀಡಿಯಾಟ್ರಿಕ್ ಹೆಮೆಟೋ ಆಂಕಾಲಜಿ ವಿಭಾಗದ ಡಾ. ಚಂದನಾ ಪೈ ಅವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News