ಮಂಗಳೂರು: ʼಗಲ್ಲಿ ಕ್ರಿಕೆಟ್ʼ ಗೆ ಐಪಿಎಲ್ ಮಾದರಿ ಬಿಡ್ಡಿಂಗ್

Update: 2024-12-15 07:09 GMT

ಮಂಗಳೂರು: ಮಂಗಳೂರಿನ ಕಂದಕ್ ಪರಿಸರದಲ್ಲಿ ಜನವರಿ 10 ರಿಂದ 19 ತನಕ ನಡೆಯುವ ಗಲ್ಲಿ ಪ್ರೀಮಿಯರ್ ಲೀಗ್ ನಾಲ್ಕನೇ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ಶನಿವಾರ ನಗರದ ರೊಸಾರಿಯೋ ಮಿನಿ ಹಾಲ್ ನಲ್ಲಿ ನಡೆಯಿತು.

ಬಿಡ್ಡಿಂಗ್ ನಲ್ಲಿ 49 ಆಟಗಾರರು ಹರಾಜಾಗಿದ್ದಾರೆ. ವೀಕ್ಷಿತ್ ಕಂದುಕ ಜಿಪಿಎಲ್ ಹರಾಜಿನಲ್ಲಿ ಅತೀ ಹೆಚ್ಚು ಬೆಲೆಗೆ ಬಿಕರಿಯಾಗಿದ್ದಾರೆ. ಉಳಿದಂತೆ ಜಾಫರ್ ಸಾದಿಕ್, ಹಕೀಂ ಉಸ್ಮಾನ್, ರಿಲ್ವಾನ್, ಪ್ರಮೋದ್ ಕಂದುಕ, ಝಮೀರ್, ನಿಯಾಝ್, ಪ್ರದೀಪ್ ಕುಮಾರ್ ಈ ಬಾರಿಯ ಫ್ರಾಂಚೈಸಿಗಳಿಗೆ ದುಬಾರಿ ಮೊತ್ತದಲ್ಲಿ ಖರೀದಿಯಾದರು.

ಗಲ್ಲಿ ಪ್ರೀಮಿಯರ್ ಲೀಗ್ ಫ್ರಾಂಚೈಸಿಗಳಾದ ಅಫ್ತಾಬ್ ಬೋಳಾರ್ ಮಾಲಕತ್ವದ ಕಂದಕ್ ಬುಲ್ಸ್, ಮೊಹಮ್ಮದ್ ಅಶ್ರಫ್ ಮಾಲಕತ್ವದ ಕಂದಕ್ ನೈಟ್ ರೈಡರ್, ಅಶ್ರಫ್ ಅಲಿ ನೇತೃತ್ವದ ಕಂದಕ್ ವಾರಿಯರ್ಸ್‌, ಯಹ್ಯಾ ಮಾಲಕತ್ವದ ಕಂದಕ್ ಸೂಪರ್ ಕಿಂಗ್ಸ್‌, ಮುಝಫರ್ ಮಾಲಕತ್ವದ ಕಂದಕ್ ಯುನೈಟೆಡ್, ಫಾರೂಕ್ ನೇತೃತ್ವದ ರಾಯಲ್ ಕಂದಕ್ ಹಾಗೂ ಅಫ್ತಾಬ್ ಹುಸೈನ್, ತೌಸೀಫ್ ಜಂಟಿ ಮಾಲಿಕತ್ವದ ಸಿಟಿಜನ್ ಕಂದಕ್ ತಂಡಗಳು ಈ ಬಾರಿಯ ಹರಾಜಿನಲ್ಲಿ ಭಾಗವಹಿಸಿತು.

ಕಳೆದ ಬಾರಿಯ ಚಾಂಪಿಯನ್ಸ್ ತಂಡ ಕಂದಕ್ ಸೂಪರ್ ಕಿಂಗ್ಸ್ ಮೊಹಮ್ಮದ್ ಫಾಝಿಲ್ ರವರನ್ನು ಏಕೈಕ ಆಟಗಾರನಾಗಿ ಖರೀದಿಸಿತು. ಇತರ ಆಟಗಾರರನ್ನು ಫ್ರಾಂಚೈಸಿಗಳು ಪೈಪೋಟಿ ನೀಡಿದರಿಂದ ಹೊಸ ತಂಡಕ್ಕೆ ಬಿಕರಿಯಾದರು. ಮೂರು ಆವೃತ್ತಿಯಲ್ಲಿ ಮೂರು ವಿವಿಧ ತಂಡಗಳು ಪ್ರಶಸ್ತಿ ಪಡೆದುಕೊಂಡಿದೆ.

ಜಿಪಿಎಲ್ ಮೆಗಾ ಹರಾಜಿನ ಅಧ್ಯಕ್ಷತೆಯನ್ನು ಮನ್ಸೂರ್ ಕುದ್ರೋಳಿ ನೆರವೇರಿಸಿದರು. ಗಲ್ಲಿ ಪ್ರೀಮಿಯರ್ ಲೀಗ್ ನಾಲ್ಕನೇ ಆವೃತ್ತಿ ಜನವರಿ 10 ರಿಂದ ಜನವರಿ 19 ರವರೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ರೊಸಾರಿಯೋ ಚರ್ಚ್ ಧರ್ಮ ಗುರುಗಳಾದ ಫಾ| ಅಲ್ಫೈಡ್ ಜೆ ಪಿಂಟೊ, ಸ್ಥಳೀಯ ಪಾಲಿಕೆ ಸದಸ್ಯರಾದ ಅಬ್ದುಲ್ ಲತೀಫ್, ಕಮಲ್ ವಿಡಿಯೋ ಮಾಲಕರಾದ ಕಮಲಕ್ಷಾ ಜೆ, ರೊಸಾರಿಯೋ ಶಾಲೆಯ ವ್ಯವಸ್ಥಾಪಕರಾದ ಲ್ಯಾನ್ಸಿ ಕ್ರಾಸ್ಥ ಉಪಸ್ಥಿತರಿದ್ದರು.


Delete Edit


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News