ಮಂಗಳೂರು : ಬಿಐಟಿ ಇಬ್ಬರು ವಿದ್ಯಾರ್ಥಿನಿಯರಿಗೆ ವಿಟಿಯು ರ‍್ಯಾಂಕ್‌

Update: 2024-03-07 17:37 GMT

ಮಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ (ವಿಟಿಯು) ಇತ್ತೀಚೆಗೆ ಪ್ರಕಟಿಸಿದ ಫಲಿತಾಂಶದಲ್ಲಿ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ)ಯ ಇಬ್ಬರು ವಿದ್ಯಾರ್ಥಿನಿಯರು M.Tech ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆಯನ್ನು ಪ್ರದರ್ಶಿಸಿ, ರ‍್ಯಾಂಕ್‌ ಪಡೆದಿದ್ದಾರೆ.

ಅಬ್ದುಲ್ ಅಝೀಝ್ ಖಾದ್ರಿಯವರ ಪುತ್ರಿ ಅರ್ಝೂ ಖಾದ್ರಿ ಅವರು M.Tech (ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್‌)ನಲ್ಲಿ 9.06 CGPA ಯೊಂದಿಗೆ 2ನೇ ರ‍್ಯಾಂಕ್‌ ಗಳಿಸಿದ್ದಾರೆ. ಭಟ್ಕಳ ಮೂಲದ ಅರ್ಝೂ ಅವರು ಭಟ್ಕಳದ ಅಂಜುಮನ್‌ನಲ್ಲಿ ತಮ್ಮ ಪ್ರಾಥಮಿಕ ಮತ್ತು ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.

“ವಿದೇಶದಲ್ಲಿ ಕೆಲಸ ಮಾಡುವ ನನ್ನ ತಂದೆಯೇ ನನಗೆ ಜೀವನದಲ್ಲಿ ಸ್ಫೂರ್ತಿ. ಅವರೇ ನನಗೆ ಪ್ರೇರಣೆಯ ಮೂಲ. ಗೃಹಿಣಿಯಾಗಿರುವ ನನ್ನ ತಾಯಿ ನನ್ನ ಯಶಸ್ಸಿನ ಹಿಂದಿನ ಪ್ರೇರಕ ಶಕ್ತಿ” ಎಂದು ಅರ್ಝೂ ಸಂತಸ ಹಂಚಿಕೊಂಡರು. ಅರ್ಝೂ ಅವರ ಶೈಕ್ಷಣಿಕ ಆಸಕ್ತಿಗಳು ಇಂಜಿನಿಯರಿಂಗ್ ಸುತ್ತ ಕೇಂದ್ರೀಕೃತವಾಗಿವೆ.

ಸಿಎಚ್ ಮುಹಮ್ಮದ್ ಕುಂಞಿ ಅವರ ಪುತ್ರಿ ಫಾತಿಮಾ ಕೆ M.Tech (ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್‌)ನಲ್ಲಿ 7ನೇ ರ‍್ಯಾಂಕ್ ಗಳಿಸಿದ್ದಾರೆ.

ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಶ್ಲಾಘನೀಯ ಸಾಧನೆ ಮಾಡಿದ ಇಬ್ಬರೂ ವಿದ್ಯಾರ್ಥಿನಿಯರನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಯ್ಯದ್ ಮೊಹಮ್ಮದ್ ಬ್ಯಾರಿ ಹಾಗೂ ಬಿಐಟಿ ಆಡಳಿತ ಮಂಡಳಿಯು ಅಭಿನಂದಿಸಿ, ಶುಭ ಹಾರೈಸಿದೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News