ಉಳ್ಳಾಲ ದರ್ಗಾ ಸಮಿತಿಯಿಂದ ಮೀಲಾದ್ ಸ್ವಲಾತ್ ಮೆರವಣಿಗೆ

Update: 2023-09-28 08:37 GMT

ಉಳ್ಳಾಲ, ಸೆ.28: ಪ್ರವಾದಿ ಮುಹಮ್ಮದ್ ಮುಸ್ತಫ(ಸ.) ಅವರ ಜನ್ಮ ದಿನಾಚರಣೆ ಪ್ರಯುಕ್ತ ಗುರುವಾರ ಉಳ್ಳಾಲ ಜುಮಾ ಮಸೀದಿ ಮತ್ತು ಸೈಯದ್ ಮದನಿ ದರ್ಗಾ ಸಮಿತಿಯ ವತಿಯಿಂದ ಮೀಲಾದ್ ಸ್ವಲಾತ್ ಮೆರವಣಿಗೆ ನಡೆಯಿತು,

ಕೇಂದ್ರ ಜುಮಾ ಮಸೀದಿಯ ಖತೀಬ್ ಇಬ್ರಾಹೀಂ ಸಅದಿ ಮತ್ತು ಸೈಯದ್ ಮದನಿ ಶರೀಅತ್ ಕಾಲೇಜು ಪ್ರಾಂಶುಪಾಲ ಅಹ್ಮದ್ ಕುಟ್ಟಿ ಸಖಾಫಿ, ದುಆ ನೆರವೇರಿಸಿದರು. ದರ್ಗಾ ಸಮಿತಿಯ ಅಧ್ಯಕ್ಷ ಬಿ.ಜಿ.ಹನೀಫ್ ಹಾಜಿ ಧ್ವಜಾರೋಹಣಗೈದರು.

ಕೋಟೆಪುರದಿಂದ ಉಳ್ಳಾಲ ದರ್ಗಾ ವರೆಗೆ ಮೀಲಾದ್ ಜಾಥಾ ನಡೆಯಿತು. ಉಳ್ಳಾಲದ 32 ಮೊಹಲ್ಲಾಗಳ ಮದ್ರಸ ವಿದ್ಯಾರ್ಥಿಗಳು, ಮುಅಲ್ಲಿಂಗಳು, ಧಾರ್ಮಿಕ ಮುಖಂಡರು, ವಿವಿಧ ಮೊಹಲ್ಲಾಗಳ ಸಮಿತಿಯ ಸದಸ್ಯರನ್ನೊಳಗೊಂಡ ಜಾಥಾಕ್ಕೆ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ ನೀಡಿದರು. ಕೋಟೆಪುರ ಖತೀಬ್ ಇರ್ಷಾದ್ ಸಖಾಫಿ ದುಆಗೈದರು. ಕೋಟೆಪುರ ಮಸೀದಿಯ ಅಧ್ಯಕ್ಷ ಅಬ್ಬಾಸ್ ಕೋಟೆಪುರ ಮೆರವಣಿಯನ್ನು ಸ್ವಾಗತಿಸಿದರು,

ಜಾಥಾದಲ್ಲಿ ದಫ್ , ಮೌಲೂದು ಪಾರಾಯಣ, ಪ್ರವಾದಿ ಸಂದೇಶಗಳನ್ನು ಸಾರಾಲಾಯಿತು.

ದರ್ಗಾದಲ್ಲಿ ನಡೆದ ಮೀಲಾದ್ ಜಾಥಾ ಸಮಾಪನಗೊಂಡಿತು. ಈ ವೇಳೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿದ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ವಿಶ್ವ ಪ್ರವಾದಿಯವರ ಜೀವನದ ಹಾದಿ ನಮ್ಮದಾಗಬೇಕು. ಪ್ರೀತಿ ಸೌಹಾರ್ದದ ಬದುಕು ನಮ್ಮದಾಗಬೇಕು. ಸಮಾಜದಲ್ಲಿ ಏಕತೆ ಕಾಪಾಡಿಕೊಂಡು ಬರಬೇಕು ಎಂದು ಕರೆ ನೀಡಿದರು.

ದರ್ಗಾ ಸಮಿತಿಯ ಅಧ್ಯಕ್ಷ ಹನೀಫ್ ಹಾಜಿ ಮಾತನಾಡಿ, ಪ್ರವಾದಿಯವರ ಸಂದೇಶವನ್ನು ಪಾಲಿಸಿಕೊಂಡು ಒಗ್ಗಟ್ಟಿನ ಜೀವನ ನಮ್ಮದಾಗಬೇಕು ಎಂದರು.

ಮೀಲಾದ್ ಮೆರವಣಿಗೆಗೆ ಎಲ್ಲಾ ಧರ್ವದವರ ಸಹಕಾರ ನೀಡಿದ್ದಾರೆ. ಅದೇರೀತಿ ಮೆರವಣಿಗೆಗೆ ಸಹಕರಿಸಿದ ಪೊಲೀಸ್ ಇಲಾಖೆ, ಸ್ವಚ್ಚತೆಗೆ ಸಹಕರಿಸಿದ ಉಳ್ಳಾಲ ನಗರಸಭಾ ಪೌರ ಕಾರ್ಮಿಕರಿಗೆ ಅಭಾರಿ ಎಂದು ಅವರು ಹೇಳಿದರು.

ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ವಂದಿಸಿದರು.

ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ದರ್ಗಾ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ ವೇ, ಕೋಶಾಧಿಕಾರಿ ನಾಝಿಮ್ ಮುಕ್ಕಚ್ಚೇರಿ, ಅಡಿಟರ್ ಫಾರೂಕ್ ಕಲ್ಲಾಪು, ಕಾರ್ಯದರ್ಶಿ ಇಸಾಕ್ ಮೇಲಂಗಡಿ, ದರ್ಗಾ ಸಮಿತಿಯ ಮಾಜಿ ಅಧ್ಯಕ್ಷ ಹಂಝ ಹಾಜಿ, ಮಾಜಿ ಉಪಾಧ್ಯಕ್ಷ ಯು.ಕೆ.ಮೋನು ಇಸ್ಮಾಯೀಲ್, ಡಿಸಿಪಿ ಸಿದ್ಧಾರ್ಥ್, ಎಸಿಪಿ ಧನ್ಯಾ, ಉಳ್ಳಾಲ ಇನ್ ಸ್ಪೆಕ್ಟರ್ ಬಾಲಕೃಷ್ಣ, ಮೆರವಣಿಗೆ ಉಸ್ತುವಾರಿ ಫಾರೂಕ್ ಮುಕ್ಕಚ್ಚೇರಿ, ಅಶ್ರಫ್ ಅಕ್ಕರೆಕರೆ, ಅಮೀರ್ ಕಲ್ಲಾಪು, ಅಝೀಝ್ ಕೋಡಿ ಮತ್ತು ಸಮಿತಿ ಸದಸ್ಯರು, ಮೊಹಲ್ಲಾ ಸಮಿತಿ ಉಪಸ್ಥಿತರಿದ್ದರು.

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News