ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾಗಿ ಮೂಸಬ್ಬ ಪಿ. ಬ್ಯಾರಿ ಪುನರಾಯ್ಕೆ

Update: 2023-07-24 04:46 GMT

ಮೂಸಬ್ಬ ಪಿ. ಬ್ಯಾರಿ | ರಿಯಾಝ್ ಅಹ್ಮದ್

ಮಂಗಳೂರು, ಜು.24: ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ(MEIF) ದ. ಕ. ಮತ್ತು ಉಡುಪಿ ಜಿಲ್ಲೆ ಇದರ 2023-25ನೇ ಸಾಲಿಗೆ ಅಧ್ಯಕ್ಷರಾಗಿ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ಪುನರಾಯ್ಕೆಗೊಂಡಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ರಿಯಾಝ್ ಅಹ್ಮದ್ ಕೆ.ಬಿ. ಆಯ್ಕೆಗೊಂಡಿದ್ದಾರೆ.

ಇತ್ತೀಚೆಗೆ ನಡೆದ ಮೀಫ್ ಮಹಾಸಭೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಉಮರ್ ಟೀಕೆ, ಗೌರವ ಸಲಹೆಗಾರರಾಗಿ ಸೈಯದ್ ಮುಹಮ್ಮದ್ ಬ್ಯಾರಿ, ಉಪಾಧ್ಯಕ್ಷರುಗಳಾಗಿ ಬಿ.ಎ.ಮುಮ್ತಾಝ್ ಅಲಿ (ಸೆಂಟ್ರಲ್ ಝೋನ್), ಕೆ.ಎಂ.ಮುಸ್ತಫ ಸುಳ್ಯ (ಈಸ್ಟ್ ಝೋನ್), ಶಬೀಹ್ ಅಹ್ಮದ್ ಕಾಝಿ (ನಾರ್ತ್ ಝೋನ್), ಕಾರ್ಯದರ್ಶಿಯಾಗಿ ಅನ್ವರ್ ಹುಸೈನ್ (ಆಡಳಿತಾತ್ಮಕ), ಪಿ.ಎ.ಇಲ್ಯಾಸ್ (ಮಾಧ್ಯಮ), ಮುಹಮ್ಮದ್ ಶಾರಿಕ್ (ಕಾರ್ಯಕ್ರಮ), ಕೋಶಾಧಿಕಾರಿಯಾಗಿ ನಿಸಾರ್ ಮುಹಮ್ಮದ್ ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರು

ಸೆಂಟ್ರಲ್ ಝೋನ್: ಸಿರಾಜ್ ಮನೆಗಾರ್, ಬಿ.ಎ.ಇಕ್ಬಾಲ್, ಯು.ಕೆ.ಇಬ್ರಾಹೀಂ, ಪರ್ವೀಝ್ ಅಲಿ, ಖಾಲಿದ್ ಉಜಿರೆ, ಅಬ್ದುಲ್ ರಝಾಕ್ ಗೋಳ್ತಮಜಲು, ಶಹಾಮ್.

ಈಸ್ಟ್ ಝೋನ್: ಶೈಖ್ ರಹ್ಮತುಲ್ಲಾ, ಹೈದರ್ ಮರ್ಧಾಳ, ಎಸ್.ಎಂ.ಬಶೀರ್, ಹೈದರ್.

ನಾರ್ತ್ ಝೋನ್: ಶಂಸುದ್ದೀನ್, ಉಮರ್ ಫಾರೂಕ್ ಆಯ್ಕೆಯಾದರು.

ಬಿ.ಎ.ನಝೀರ್, ಮುಸ್ತಫ ಸಅದಿ, ಅಬ್ದುಲ್ ರಹ್ಮಾನ್ ಮತ್ತು ಬಿ.ಎ.ಮಯ್ಯದಿ ಖಾಯಂ ಆಹ್ವಾನಿತರಾಗಿರುವರು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News