ಬಜಾಲ್: ಜೆಎಫ್ ಅಸೋಸಿಯೇಶನ್ ನಿಂದ ಸ್ವಚ್ಛತಾ ಕಾರ್ಯಕ್ರಮ

Update: 2024-10-13 10:17 GMT

ಮಂಗಳೂರು, ಅ.13: ಬಜಾಲ್ ನಂತೂರಿನ ಜೆಎಫ್ ಅಸೋಸಿಯೇಶನ್ ವತಿಯಿಂದ ಸ್ವಚ್ಛತಾ ಕಾರ್ಯಕ್ರಮವು ರವಿವಾರ ಜೆಎಫ್ ಅಸೋಸಿಯೇಶನ್ ಅಧ್ಯಕ್ಷ ಅಹ್ಮದ್ ಕುರೈಶ್ ಮಾರ್ಗದರ್ಶನದಲ್ಲಿ ನಡೆಯಿತು.

ಕಾರ್ಪೊರೇಟರ್ ಹಾಗೂ ಬದ್ರಿಯಾ ಮಸೀದಿಯ ಅಧ್ಯಕ್ಷ ಅಬ್ದುರ್ರವೂಫ್ ಬಜಾಲ್ ರಸ್ತೆ ಗುಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಆರೋಗ್ಯ ಮತ್ತು ಪರಿಸರ ಸ್ವಚ್ಚತೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪರಿಸರ ಸ್ವಚ್ಚತೆ ಇರುವಲ್ಲಿ ಆರೋಗ್ಯ ಇರುತ್ತದೆ. ಶುಚಿತ್ವದ ಕೊರತೆ ಇದ್ದಲ್ಲಿ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಜನಸಾಮಾನ್ಯರು ಆರೋಗ್ಯವಾಗಿದ್ದಲ್ಲಿ ಮಾತ್ರ ಅವರ ಜೀವನ ಮಟ್ಟ ಉತ್ತಮವಾಗಲು ಸಾಧ್ಯ. ದೇಶದಲ್ಲಿ ಶೇ.80ರಷ್ಟು ಆರೋಗ್ಯದ ಸಮಸ್ಯೆಗಳು ನೈರ್ಮಲ್ಯದ ಕೊರತೆಯಿಂದ ಉಂಟಾಗುತ್ತವೆ. ಅರಿವಿನ ಕೊರತೆಯಿಂದಾಗಿ ಜನಸಾಮಾನ್ಯರು ಅನೇಕ ರೋಗಗಳಿಗೆ ತುತ್ತಾಗಲು ಕಾರಣವಾಗುತ್ತಿದೆ ಎಂದರು.

ಇದೇ ಸಂದರ್ಭ ಸ್ವಚ್ಛತೆಯ ಅರಿವಿಗಾಗಿ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಪೊರೇಟರ್ ಅಶ್ರಫ್ ಜೆಎಫ್ ಅಸೋಸಿಯೇಶನ್ ನ ಸೇವೆಯನ್ನು ಶ್ಲಾಘಿಸಿದರು.

ಬದ್ರಿಯಾ ಜುಮಾ ಮಸೀದಿಯ ಉಪಾಧ್ಯಕ್ಷ ಎಚ್.ಎಸ್. ಹನೀಫ್, ಸಂಚಾಲಕರಾದ ಬಿ. ಫಕ್ರುದ್ದೀನ್, ನಝೀರ್ ಬಜಾಲ್, ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಹಮ್ಮಬ್ಬ ಮೋನಕ, ಮೊಯ್ದಿನ್ ಕುಂಞಿ, ಎನ್.ಎಸ್.ಆರ್.ನಾಸಿರ್, ಕಲಂದರ್, ಜೆಎಫ್ಎ ಉಪಾಧ್ಯಕ್ಷ ಶೌಕತ್ ಇಬ್ರಾಹಿಂ, ಹನೀಫ್ ಕೆಳಗಿನಮನೆ, ಅನ್ವರ್ ಕಜಕಾಂಡ, ಅಬೂಬಕರ್, ಎಂ.ಮುಸ್ತಫ ಕಟ್ಟ ಮತ್ತಿತರರು ಪಾಲ್ಗೊಂಡಿದ್ದರು.

ಜೆಎಫ್ಎ ಪ್ರಧಾನ ಕಾರ್ಯದರ್ಶಿ ಹಕೀಝೆ ಸ್ವಾಗತಿಸಿದರು. ಉನೈಸ್ ವಂದಿಸಿದರು. ಸಜ್ಜದ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News