ಅಬ್ದುಲ್ ರಹ್ಮಾನ್ ಅಹ್ಸನಿ ನಿಧನ
Update: 2024-07-31 10:56 GMT
ಮಂಗಳೂರು: ಮರ್ಕಝ್ ಅಲ್ - ಹಿದಾಯ ಸ್ಕೂಲ್ ಇದರ ಸದರ್ ಮುಅಲ್ಲಿಮ್, ಕುಂಪಲ ನೂರಾನಿಯಾ ಯತೀಮ್ ಖಾನ ಮೇಲ್ವಿಚಾರಕರೂ ಆಗಿದ್ದ ಅಬ್ದುಲ್ ರಹ್ಮಾನ್ ಅಹ್ಸನಿ ಜಲಾಳ್ ಬಾಗ್ (40) ಅವರು ಹೃದಯ ಸ್ತಂಭನನದಿಂದ ನಿಧನರಾಗಿದ್ದಾರೆ. ದಿವಂಗತ ಶುಹೈಬ್ ಮುಸ್ಲಿಯಾರ್ ಅವರ ಪುತ್ರರಾದ ಅಬ್ದುಲ್ ರಹ್ಮಾನ್ ಅಹ್ಸನಿ ಅವರು ಮಳಲಿ ನಿವಾಸಿ.
ಮೃತರು ಪತ್ನಿ, ನಾಲ್ಕು ಮಕ್ಕಳ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮದ್ರಸ ರಂಗದಲ್ಲಿ 18 ವರ್ಷ ಸೇವೆ ಸಲ್ಲಿಸಿದ ಉಸ್ತಾದರು ಸರ್ವರ ಪ್ರೀತಿಗೆ ಪಾತ್ರರಾಗಿದ್ದರು.
ಉಸ್ತಾದರ ನಿಧನಕ್ಕೆ SJM ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ಸಮಿತಿ ಸಂತಾಪ ಸೂಚಿಸಿದೆ.