ಗೋಪಾಲಕೃಷ್ಣ ಭಟ್ ನಿಧನ

Update: 2023-07-31 16:21 GMT

ಕುಂದಾಪುರ: ಕೆನರಾ ಬ್ಯಾಂಕಿನ ನಿವೃತ್ತ ಅಧಿಕಾರಿ ಜಿ.ಗೋಪಾಲಕೃಷ್ಣ ಭಟ್ (ಕಾಶೀನಾಥ್-64 ವರ್ಷ) ಸೋಮವಾರ ಇಲ್ಲಿ ನಿಧನರಾದರು. ಇವರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

ಗಂಗೊಳ್ಳಿ ಅಂಬಿಕಾ ದೇವಸ್ಥಾನದ ಪ್ರಸಿದ್ಧ ಭಟ್ ಮನೆತನದ ಗೋಪಾಲಕೃಷ್ಣ ಭಟ್, ಕೆನರಾ ಬ್ಯಾಂಕ್ ನೌಕರರಾಗಿ ಹಲವು ಕಡೆ ಸೇವೆ ಸಲ್ಲಿಸಿದ್ದು, ನಿವೃತ್ತಿಯ ಬಳಿಕ ಕುಂದಾಪುರದಲ್ಲಿ ನೆಲೆಸಿದ್ದರು. ಕಾಶೀನಾಥ್ ಎಂದೇ ಪ್ರಸಿದ್ಧರಾದ ಇವರು ಕ್ರಿಯಾಶೀಲ ಸಮಾಜಸೇವಕರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಡಾ. ಆಶಾ ಭಟ್