ವಳಾಲು ಮೂಸಾನ್ ಹಾಜಿ
Update: 2024-07-07 13:50 GMT
ಉಪ್ಪಿನಂಗಡಿ: ಬಜತ್ತೂರು ಗ್ರಾಮದ ವಳಾಲು ಅರಬಿ ನಿವಾಸಿ ಮೂಸಾನ್ ಹಾಜಿ (78) ಎಂಬವರು ಹೃದಯಾಘಾತದಿಂದ ಬೆದ್ರೋಡಿಯಲ್ಲಿರುವ ತನ್ನ ಪುತ್ರನ ಮನೆಯಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಕರಾಯ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಅಬೂಬಕ್ಕರ್ ಸಿದ್ದಿಕ್ ಸೇರಿದಂತೆ ನಾಲ್ವರು ಪುತ್ರರು, ಮೂವರು ಪುತ್ರಿಯರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.