ಸತೀಶ್ ಶೆಟ್ಟಿ ಕುರ್ಡುಮೆ
Update: 2024-07-08 15:34 GMT
ಬಂಟ್ವಾಳ : ಮಡಂತ್ಯಾರು ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಕುಕ್ಕಳ ಗ್ರಾಮದ ಕುರ್ಡುಮೆ ನಿವಾಸಿ ಸತೀಶ್ ಶೆಟ್ಟಿ ಕುರ್ಡುಮೆ (47) ಅವರು ಅಸೌಖ್ಯದಿಂದ ಸೋಮವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಅವರು ಪ್ರಗತಿಪರ ಕೃಷಿಕರಾಗಿದ್ದು, ವರ್ಷಗಳ ಹಿಂದೆ ಶಾಮಿಯಾನದ ಉದ್ಯಮ ನಡೆಸುತ್ತಿದ್ದರು. ಉತ್ತಮ ಕಬಡ್ಡಿ ಆಟಗಾರ ರಾಗಿದ್ದ ಅವರು ಜೈ ಹನುಮಾನ್ ಸ್ಪೋರ್ಟ್ಸ್ ಕ್ಲಬ್ ನ ಸ್ಥಾಪಕಾಧ್ಯಕ್ಷರಾಗಿ ಪ್ರತೀ ವರ್ಷ ಬೈಕ್ ರೇಸ್ ಸಂಘಟಿಸಿದ್ದರು. ಕ್ಲಬ್ ಮೂಲಕ ಕಬಡ್ಡಿ ಪಂದ್ಯಾಟ ಏರ್ಪಡಿಸಿ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿದ್ದರು. ಗ್ರಾ.ಪಂ. ಸದಸ್ಯರಾಗಿ ಉತ್ತಮ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜನಾನುರಾಗಿಯಾಗಿದ್ದರು. ಕೆಲವು ದಿನಗಳ ಹಿಂದೆ ಅಸ್ವಸ್ಥಗೊಂಡ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ನಿಧನ ಹೊಂದಿದರು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.