ಅಹ್ಮದ್ ಹಾಜಿ
Update: 2024-07-19 13:59 GMT
ಮಂಗಳೂರು, ಜು.19: ನಗರದ ಬಂದರ್ ನಿವಾಸಿ, ಉದ್ಯಮಿ ಎಫ್.ಅಹ್ಮದ್ ಹಾಜಿ (84) ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು.
ಎಫ್‌ಎ ಹಾಜಿ ಎಂದೇ ಸ್ಥಳೀಯವಾಗಿ ಚಿರಪರಿಚಿತರಾಗಿರುವ ಇವರು ಪತ್ನಿ ಮತ್ತು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಯಲ್ಲಿ ಇವರು ತೊಡಗಿಸಿಕೊಂಡಿದ್ದರು. ಬಂದರ್ ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಯ ಆವರಣದಲ್ಲಿ ದಫನ ಕಾರ್ಯ ನೆರವೇರಿಸಲಾಯಿತು.
*ಅಹ್ಮದ್ ಹಾಜಿ ಅವರ ನಿಧನಕ್ಕೆ ದ.ಕ.ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷ ಸಿ.ಅಬ್ದುರ‌್ರಹ್ಮಾನ್, ಪ್ರಧಾನ ಕಾರ್ಯದರ್ಶಿ ನೌಶಾದ್ ಮಲಾರ್, ಜಿಲ್ಲಾ ಕೋಶಾಧಿಕಾರಿ ರಿಯಾಝ್ ಹರೇಕಳ, ಸುನ್ನಿ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಚ್. ಮುಹಮ್ಮದ್ ಇಸ್ಮಾಯಿಲ್ ಬಂದರ್, ಬಾಫಕಿ ಫೌಂಡೇಶನ್‌ನ ಅಧ್ಯಕ್ಷ ಡಾ. ಶೇಕ್ ಬಾವ, ಅಡ್ವಕೇಟ್ ಎಸ್. ಸುಲೈಮಾನ್, ಶಾಹುಲ್ ಹಮೀದ್ ತಂಙಳ್ ಸಂತಾಪ ಸೂಚಿಸಿದ್ದಾರೆ.