ಮುಹಮ್ಮದ್ ಅಲಿ ರೋಯಲ್
Update: 2024-07-22 17:26 GMT
ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣ ಬಳಿಯ ನಿವಾಸಿ, ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ರೋಯಲ್ ಅಬ್ಬಾಸ್‍ರವರ ಪುತ್ರ, ಪ್ರಸಕ್ತ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ನೆಲೆಸಿರುವ ಮುಹಮ್ಮದ್ ಆಲಿ ರೋಯಲ್ (56) ಹೃದಯಾಘಾತದಿಂದ ಜು. 22ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಉಪ್ಪಿನಂಗಡಿ ಶೆಣೈ ಆಸ್ಪತ್ರೆ ಎದುರಿನಲ್ಲಿ ಇವರು ರೋಯಲ್ ಕಾಡುತ್ಪತ್ತಿ ವ್ಯಾಪಾರ ನಡೆಸುತ್ತಿದ್ದರು. ಕೆಲ ವರ್ಷಗಳ ಹಿಂದೆ ಅಲ್ಲಿದ್ದ ಹಳೇ ಕಟ್ಟಡವನ್ನು ಕೆಡವಿ ರೋಯಲ್ ಕಾಂಪ್ಲೆಕ್ಸ್ ನಿರ್ಮಿಸಿದ್ದರು. ಇದರ ಪಾಲುದಾರಿಕೆಯನ್ನು ಹೊಂದಿದ್ದ ಇವರು ಕಳೆದ ಕೆಲ ವರ್ಷಗಳಿಂದ ಕಾಟಿಪಳ್ಳದಲ್ಲಿ ನೆಲೆಸಿ ಅಲ್ಲಿ ಜಿನಸು ಅಂಗಡಿಯನ್ನು ನಡೆಸುತ್ತಿದ್ದರು.
ಮೃತ ಮುಹಮ್ಮದ್ ಆಲಿಯವರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ.