ಸದಾಶಿವ ಕರ್ಕೇರ
Update: 2024-07-25 15:01 GMT
ಉಡುಪಿ : ಕಾಂಗ್ರೆಸ್ ಪಕ್ಷದ ಮುಂದಾಳು ದಿ.ರಾಜು ಪಿ.ಕರ್ಕೇರ ಅವರ ಪುತ್ರ ಸದಾಶಿವ ಆರ್.ಕರ್ಕೇರ ಮಲ್ಪೆಅಲ್ಪಕಾಲದ ಅಸೌಖ್ಯದಿಂದಾಗಿ ಇಂದು ನಿಧನರಾದರು.
ಮಲ್ಪೆಮಂಡಲ ಪಂಚಾಯತ್ ಸದಸ್ಯರಾಗಿ, ರಾಜ್ಯ ಭೂ ಅಭಿವೃದ್ಧಿ ಬ್ಯಾಂಕ್ ಬೆಂಗಳೂರು ಇದರ ನಿರ್ದೇಶಕರಾಗಿ ಕೊಡವೂರು ವ್ಯವಸಾಯ ಸೇವಾ ಸಂಘ ಮತ್ತು ಉಡುಪಿ ತಾಲೂಕು ಮಾರ್ಕೆಟಿಂಗ್ ಸೊಸೈಟಿ ಇದರ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಇವರು ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಇವರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂದುಗಳನ್ನು ಅಗಲಿದ್ದಾರೆ.