ಫ್ರಾನ್ಸಿಸ್ ಮಸ್ಕರೇನಸ್
Update: 2024-07-30 12:22 GMT
ಉಡುಪಿ: ಮಾಜಿ ಕೇಂದ್ರ ಸಚಿವ ದಿವಂಗತ ಆಸ್ಕರ್ ಫರ್ನಾಂಡಿಸ್ ಅವರ ಆಪ್ತರೆನಿಸಿ ಚಾಲಕರಾಗಿ ದುಡಿದ ಅಮ್ಮಂಜೆ ಫ್ರಾನ್ಸಿಸ್ ಮಸ್ಕರೇನಸ್ (70) ಇಂದು ಬೆಳಗ್ಗೆ ನಿಧನರಾದರು.
ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಇವರು, ಆಸ್ಕರ್ ಅವರ ಮಣಿಪಾಲದ ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಟೆಂಪೋದ ಚಾಲಕರಾಗಿ, ನಂತರ ದಿನಗಳಲ್ಲಿ ಆಸ್ಕರ್ ಫರ್ನಾಂಡಿಸ್ ಅವರ ಮೂರು ಚುನಾವಣೆಯಲ್ಲಿ ಚಾಲಕರಾಗಿ ಹಗಲಿರಲು ದುಡಿದಿದ್ದರು. ಕೊಳಲಗಿರಿಯ ಆಟೋ ಚಾಲಕರ ಸಂಘದ ಹಿರಿಯ ಸದಸ್ಯರಾಗಿದ್ದು, ಸಂತ ಅಂತೋನಿ ಓರ್ತೋ ಡಾಕ್ಸ್ ಚರ್ಚಿನ ಟ್ರಸ್ಟಿ ಯಾಗಿ ಸೇವೆ ಸಲ್ಲಿಸಿದ್ದರು. ಇವರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.