ಜಾನಕಿ ವೆಂಕಪ್ಪ ಮೆಂಡನ್
Update: 2024-08-01 12:08 GMT
ಮಂಗಳೂರು: ಬೈಕಂಪಾಡಿ ಪಡು ಗ್ರಾಮ ನಿವಾಸಿ ಜಾನಕಿ ವೆಂಕಪ್ಪ ಮೆಂಡನ್ (95)ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಜು. 27ರಂದು ನಿಧನರಾದರು.
ಮುಂಬೈ ಫ್ರೆಂಚ್ ಬ್ಯಾಂಕ್ ಉದ್ಯೋಗಿಯಾಗಿದ್ದ ತನ್ನ ಪತಿಯೊಂದಿಗೆ ಹಲವು ವರ್ಷಗಳ ಕಾಲ ಮುಂಬೈಯ ಪೋರ್ಟ್ ಪ್ರದೇಶದಲ್ಲಿ ನೆಲೆಸಿದ್ದ ಇವರು ನಂತರ ಸ್ವಗ್ರಾಮಕ್ಕೆ ಬಂದು ವಾಸವಾಗಿದ್ದರು. ಮೃತರು ಸಾಮಾಜಿಕ ಕಾರ್ಯಕರ್ತ ಲೀಲಾಧರ ಬೈಕಂಪಾಡಿ ಸಹಿತ ಐವರು ಪುತ್ರರು, ಇಬ್ಬರು ಪುತ್ರಿಯರು, ಹಾಗೂ ಅಪಾರ ಬಂಧು ಬಳಗ, ಹಿತೈಷಿಗಳನ್ನು ಅಗಲಿದ್ದಾರೆ.