ಮಾರೂರ್ ಕಮಲಾಕ್ಷ ಪೈ

Update: 2024-08-10 12:29 GMT

ಮಂಗಳೂರು: ನಗರದ ಮಣ್ಣಗುಡ್ಡೆ ನಿವಾಸಿ ಖ್ಯಾತ ಉದ್ಯಮಿ ಮಾರೂರ್ ಕಮಲಾಕ್ಷ ಪೈ (84) ಅವರು ಅಲ್ಪಕಾಲದ ಅನಾರೋಗ್ಯದ ಬಳಿಕ ಶುಕ್ರವಾರ ಸ್ವಗ್ರಹದಲ್ಲಿ ನಿಧನರಾದರು.

ಅವರು ಪತ್ನಿ ಮತ್ತು ಇಬ್ಬರು ಪುತ್ರರು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಆಟೋಮೊಬೈಲ್ ಭಾಗಗಳು, ಯಂತ್ರೋಪಕರಣಗಳು ಮತ್ತು ಇಂಜಿನಿಯರಿಂಗ್ ಉತ್ಪನ್ನಗಳ ಉದ್ಯಮದಲ್ಲಿ ತೊಡಗಿರುವ ಹೆಸರಾಂತ ಮಾರೂರ್ ಗ್ರೂಪ್‌ನ ಮೊದಲ ತಲೆಮಾರಿನ ಉದ್ಯಮಿಗಳಲ್ಲಿ ಒಬ್ಬರಾಗಿದ್ದರು.

ಕಮಲಾಕ್ಷ ಪೈ ಅವರು ಅತ್ಯುತ್ತಮ ಕ್ರೀಡಾಪಟುವಾಗಿದ್ದರು, ಚಾಂಪಿಯನ್ ಕ್ರಿಕೆಟರ್ ಮತ್ತು ಟೆನಿಸ್ ಆಟಗಾರರಾಗಿ ಮಿಂಚಿದ್ದರು. ಅವರು ಪೆಂಟ್‌ಲ್ಯಾಂಡ್‌ಪೇಟ್ ಸ್ಪೋರ್ಟ್ಸ್ ಅಸೋಸಿಯೇಶನ್ (ಪಿಪಿಎಸ್‌ಎ) ಮತ್ತು ಬಾಲಮಾರುತಿ ಟೆನಿಸ್ ಕ್ಲಬ್‌ನ್ನು ಅತ್ಯುತ್ತಮವಾಗಿ ಪ್ರತಿನಿಧಿಸಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಡಾ. ಆಶಾ ಭಟ್