ಪಿ.ಎ. ಮಹಮ್ಮದ್ ನಿಧನ
Update: 2023-07-18 16:38 GMT
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕಡವಿನಬಾಗಿಲು ನಿವಾಸಿ ಪಿ.ಎ. ಮಹಮ್ಮದ್ (65) ಕೆಲ ದಿನಗಳ ಅನಾರೋಗ್ಯದಿಂದ ಜು. 18ರಂದು ತನ್ನ ಮನೆಯಲ್ಲಿ ನಿಧನ ಹೊಂದಿದರು.
ಮಹಮ್ಮದ್‍ರವರು ಮಾವುತ ಕೆಲಸ ನಿರ್ವಹಿಸಿದ ಅನುಭವಿಯಾಗಿದ್ದು, ಉಪ್ಪಿನಂಗಡಿಯ ಉದ್ಯಮಿಯೋರ್ವರ ಸಾಕು ಆನೆಗೆ ಮಾವುತನಾಗಿದ್ದರು. ಹಾಗೂ ಮರದ ವ್ಯಾಪಾರಿಗಳು
ಕಾಡಿನಿಂದ ಮರಗಳನ್ನು ತೆರವು ಮಾಡುವ ಸಂದರ್ಭದಲ್ಲಿ ಬಳಕೆಯಾಗುವ ಆನೆಯ ಮಾವುತನಾಗಿಯೂ ಕೆಲಸ ಮಾಡಿದ ಅನುಭವಿಯಾಗಿರುತ್ತಾರೆ.
ಮೃತರು ಪತ್ನಿ, ನಾಲ್ವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.