ಆರ್.ಕೆ. ರಮೇಶ್ ರಾವ್

Update: 2024-08-17 14:09 GMT

ಉಡುಪಿ, ಆ.17:ಉಡುಪಿ ಕೊಡವೂರು ಗ್ರಾಮದ ರಾಯಸ ಕುಟುಂಬದ ಆರ್.ಕೆ.ರಮೇಶ್ ರಾವ್ (92) ಬೆಂಗಳೂರಿನಲ್ಲಿ ಇತ್ತೀಚೆಗೆ ನಿಧನರಾದರು. ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದ ಇವರು ಟೆಕ್ಸೆಲ್ ಸಂಸ್ಥೆಯ ಸ್ಥಾಪಕರಾದ ಹರೀಶ್ ರಾಯಸ್ ಸಹಿತ ಮೂವರು ಪುತ್ರರು, ಓರ್ವ ಪುತ್ರಿ, ಪತ್ನಿ ಹಾಗೂ ಅಪಾರ ಬಂಧು-ಬಾಂಧವರನ್ನು ಅಗಲಿದ್ದಾರೆ.

ಧಾರ್ಮಿಕ, ಶೈಕ್ಷಣಿಕ, ಸಾಂಸ್ಕತಿಕ, ಸಾಮಾಜಿಕ ಕ್ಷೇತ್ರಕ್ಕೆ ಉದಾರ ಕೊಡುಗೆ ನೀಡಿದ ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಡಾ. ಆಶಾ ಭಟ್