ಝೈನಬಾ

Update: 2024-08-29 17:16 GMT

ಮಂಜನಾಡಿ: ದೇರಳಕಟ್ಟೆ ಸಮೀಪದ ಕಿನ್ಯ ನಿವಾಸಿ ಮರ್ಹೂಂ ಅಬೂಬಕರ್ ಬೈತಾರ್‌ರ ಪತ್ನಿ ಝೈನಬಾ (90) ಬುಧವಾರ ರಾತ್ರಿ ನಿಧನರಾಗಿದ್ದಾರೆ.

ಪುತ್ರಿ ಮತ್ತು ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಮೃತರು ಅಗಲಿದ್ದಾರೆ. ಕಿನ್ಯ ಬುಖಾರಿ ಮಸ್ಜಿದ್‌ನಲ್ಲಿ ನಡೆದ ಅಂತ್ಯ ಸಂಸ್ಕಾರಕ್ಕೆ ಸಯ್ಯಿದ್ ಶಹೀರ್ ಅಲ್ ಬುಖಾರಿ ಪೊಸೋಟ ತಂಙಳ್ ನೇತೃತ್ವ ನೀಡಿದರು.

*ಸುನ್ನೀ ಜಂಇಯತುಲ್ ಉಲಮಾ ರಾಜ್ಯ ಕಾರ್ಯದರ್ಶಿ ಕೆ.ಪಿ. ಹುಸೈನ್ ಸಅದಿ, ಮುಹಿಮ್ಮಾತ್ ಉಪಾಧ್ಯಕ್ಷ ಬಿ.ಎಸ್. ಅಬ್ದುಲ್ಲ ಕುಂಞಿ ಫೈಝಿ, ಎಸ್‌ವೈಎಸ್ ನಿಕಟಪೂರ್ವ ರಾಜ್ಯಾಧ್ಯಕ್ಷ ಡಾ. ಝೈನಿ ಕಾಮಿಲ್, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸುಫ್ಯಾನ್ ಸಖಾಫಿ, ಸಖಾಫಿ ಕೌನ್ಸಿಲ್ ರಾಜ್ಯಾಧ್ಯಕ್ಷ ಮುಹಮ್ಮದ್ ಅಲಿ ಸಖಾಫಿ ಅಶ್‌ಅರಿಯ ಸಹಿತ ಹಲವು ಗಣ್ಯರು ಮೃತರ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ನೀಡಿದರು.

ಜಂಇಯತುಲ್ ಉಲಮಾ ರಾಜ್ಯಾಧ್ಯಕ್ಷ ಝೈನುಲ್ ಉಲಮಾ ಮಾಣಿ ಉಸ್ತಾದ್, ಸ್ಪೀಕರ್ ಯು.ಟಿ. ಖಾದರ್ ಹಾಗೂ ಮೃತರ ಮೊಮ್ಮಕ್ಕಳಾದ ಎಸ್‌ವೈಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಕೆ.ಎಂ. ಮೋಂಟುಗೋಳಿ, ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಕೆ.ಎಂ. ಮುಸ್ತಫಾ ನಈಮಿ ಹಾವೇರಿ, ಜಿಲ್ಲಾಧ್ಯಕ್ಷ ಮನ್ಸೂರ್ ಹಿಮಮಿ ಸಂತಾಪ ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಡಾ. ಆಶಾ ಭಟ್