ಆರು ತಿಂಗಳಲ್ಲೇ ಗಗನಕ್ಕೇರಿದ ಚಿನ್ನದ ಬೆಲೆ; ಸಾರ್ವಕಾಲಿಕ ದಾಖಲೆ

Update: 2023-11-30 07:45 IST
ಆರು ತಿಂಗಳಲ್ಲೇ ಗಗನಕ್ಕೇರಿದ ಚಿನ್ನದ ಬೆಲೆ; ಸಾರ್ವಕಾಲಿಕ ದಾಖಲೆ

Photo: PTI

  • whatsapp icon

ಮುಂಬೈ: ಎರಡು ದಿನಗಳ ಹಿಂದಷ್ಟೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆರು ತಿಂಗಳಲ್ಲೇ ಗರಿಷ್ಠ ಬೆಲೆಯ ದಾಖಲೆ ಸ್ಥಾಪಿಸಿದ್ದ ಚಿನ್ನ, ಭಾರತದಲ್ಲಿ ಸಾರ್ವಕಾಲಿಕ ದಾಖಲೆ ಸ್ಥಾಪಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 62 ಸಾವಿರವನ್ನು ದಾಟಿದೆ.

ಚಿನ್ನ ವಹಿವಾಟಿನ ರಾಜಧಾನಿ ಮುಂಬೈನಲ್ಲಿ ಚಿನ್ನ 10 ಗ್ರಾಂಗೆ 62250 ರೂಪಾಯಿಯಲ್ಲಿ ಮಾರಾಟವಾಗಿದೆ. ಜಾಗತಿಕ ಹಾಗೂ ದೇಶಿಯ ಅಂಶಗಳು ಇದಕ್ಕೆ ಪ್ರಮುಖ ಕಾರಣವಾಗಿದ್ದು, ಕೆಲ ಪ್ರಮುಖ ಕರೆನ್ಸಿಗಳ ಎದುರು ಡಾಲರ್ ದುರ್ಬಲವಾಗಿರುವುದು, ಅಮೆರಿಕದ ಚಿನ್ನದಲೇಪದಲ್ಲಿ ತೀವ್ರ ಕುಸಿತ ಉಂಟಾಗಿರುವುದು, ವಿವಾಹ ಮತ್ತು ಹಬ್ಬದ ಸೀಸನ್ ಗಳಲ್ಲಿ ಬೇಡಿಕೆ ಅತ್ಯಧಿಕವಾಗಿರುವುದು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಪ್ರಮುಖ ಕಾರಣಗಳು.

ದೇಶೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕಳೆದ ಎರಡು ತಿಂಗಳಲ್ಲಿ ಶೇಕಡ 10ರಷ್ಟು ಹೆಚ್ಚಿದೆ ಎಂದು ಅಧಿಕೃತ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ಪ್ರಸ್ತುತ ಮಟ್ಟವು ಅಲ್ಪಾವಧಿಯಲ್ಲಿ ಲಾಭಕ್ಕೆ ಕಾರಣವಾಗಲಿದೆ ಎಂದು ತಾಂತ್ರಿಕ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಮೆಹ್ತಾ ಈಕ್ವಿಟೀಸ್ನ ಕಮೊಡಿಟಿ ವಿಭಾಗಗಳ ಉಪಾಧ್ಯಕ್ಷ ರಾಹುಲ್ ಕಲಂತ್ರಿ ಅವರ ಪ್ರಕಾರ ಚಿನ್ನದ ಬೆಲೆ ಏರಿಕೆಗೆ ಪ್ರಮುಖ ಐದು ಕಾರಣಗಳಿವೆ. ಡಾಲರ್ ಸೂಚ್ಯಂಕ ಕಳೆದ ಕೆಲ ವಾರಗಳಲ್ಲಿ ಕುಸಿತ ಕಂಡಿರುವುದು, ಅಮೆರಿಕದ ಬಾಂಡ್ ಪ್ರತಿಫಲ ಶೇಕಡ 5 ರಿಂದ 4.3ಕ್ಕೆ ಇಳಿದಿರುವುದು, ಯುಎಸ್ ಫೆಡರಲ್ ರಿಸರ್ವ್ ದರ ಏರಿಕೆ ಮಾಡುವ ನಿರೀಕ್ಷೆಯಲ್ಲಿರುವುದು ಪ್ರಮುಖ ಕಾರಣಗಳು. ದೇಶೀಯ ಮಾರುಕಟ್ಟೆಯಲ್ಲಿ ಪ್ರಬಲ ಬೇಡಿಕೆ, ಆರ್ಬಿಐನ ಚಿನ್ನ ಖರೀದಿ ಕಾರ್ಯಾಚರಣೆ ಕೂಡಾ ಇದಕ್ಕೆ ಪೂರಕ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News