ಹಿಂಸಾಚಾರ: ಆಸ್ಟ್ರೇಲಿಯಾದ ನಗರದಲ್ಲಿ ರಾತ್ರಿ ಕರ್ಫ್ಯೂ ಜಾರಿ

Update: 2024-07-08 15:51 GMT

PC : X 

ಸಿಡ್ನಿ: ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ಸೇರಿದಂತೆ ಹಿಂಸಾಚಾರದ ಹಲವು ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಹೊರವಲಯದ ಪಟ್ಟಣವಾದ ಆಲಿಸ್ ಸ್ಪ್ರಿಂಗ್ಸ್ನೇಲ್ಲಿ 3 ರಾತ್ರಿಗಳ ಕರ್ಫ್ಯೂ ಜಾರಿಗೊಳಿಸಿರುವುದಾಗಿ ಆಸ್ಟ್ರೇಲಿಯಾ ಪೊಲೀಸರು ಸೋಮವಾರ ಹೇಳಿದ್ದಾರೆ.

ಆಲಿಸ್ ಸ್ಪ್ರಿಂಗ್ಸ್ನೋಲ್ಲಿ ಕಳೆದ 3 ದಿನಗಳಲ್ಲಿ ವ್ಯಾಪಕ ಹಾನಿ, ನಷ್ಟ ಮತ್ತು ನಾಗರಿಕರಿಗೆ ಅಡಚಣೆ ಸಂಭವಿಸಿದ್ದು ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ನಾಲ್ವರು ಪೊಲೀಸ್ ಅಧಿಕಾರಿಗಳ ಮೇಲೆ ದಾಳಿಯಾಗಿದೆ. ಸೋಮವಾರದಿಂದ ಮುಂದಿನ ಮೂರು ದಿನ ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಉತ್ತರ ಪ್ರಾಂತದ ಪೊಲೀಸ್ ಆಯುಕ್ತ ಮಿಚೆಲ್ ಮರ್ಫಿ ಹೇಳಿದ್ದಾರೆ. `ಆಲಿಸ್ ಸ್ಪ್ರಿಂಗ್ಸ್ನ್ಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಅಪರಾಧ ಕೃತ್ಯಗಳು ಸ್ವೀಕಾರಾರ್ಹವಲ್ಲ. ಕರ್ಫ್ಯೂ ಜಾರಿಗೊಂಡಿರುವುದರಿಂದ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರಿಗೆ ಹೆಚ್ಚಿನ ಬಲ ಸಿಗುತ್ತದೆ' ಎಂದು ಪ್ರಾಂತದ ಮುಖ್ಯಮಂತ್ರಿ ಇವಾ ಲಾವ್ಲರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News