ಮಯನ್ಮಾರ್‌ನಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ; ಬ್ಯಾಂಕಾಕ್‌ನಲ್ಲೂ ಭಾರಿ ಕಂಪನ

ನೇಪ್ಯಿಟಾ: ಶುಕ್ರವಾರ ಮಧ್ಯಾಹ್ನ ಮ್ಯಾನ್ಮಾರ್‌ನಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ಸಾಗೈಂಗ್ ನಗರದ ವಾಯುವ್ಯಕ್ಕೆ 16 ಕಿಮೀ ದೂರದಲ್ಲಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಮತ್ತು ಜರ್ಮನಿಯ ಜಿಎಫ್‌ಝಡ್ ಭೂವಿಜ್ಞಾನ ಕೇಂದ್ರ ತಿಳಿಸಿದೆ.
ಸ್ಥಳೀಯ ಕಾಲಮಾನ 12.50ಕ್ಕೆ ಕೇಂದ್ರ ಮಯನ್ಮಾರ್ ನಲ್ಲಿ 7.7 ತೀವ್ರತೆಯ ಭೂಕಂಪನ ಸಂಭವಿಸಿದೆ. ಈ ಘಟನೆಯಲ್ಲಿ ಇಲ್ಲಿಯವರೆಗೆ ಯಾವುದೇ ಸಾವುನೋವಿನ ವರದಿಗಳಾಗಿಲ್ಲ ಹಾಗೂ ಈ ಪ್ರದೇಶದ ನಿವಾಸಿಗಳಿಗೆ ಸುನಾಮಿಯ ಮುನ್ನೆಚ್ಚರಿಕೆ ನೀಡಲಾಗಿದೆ. ಜನರು ಭಯಗೊಂಡು ಮನೆಯಿಂದ ಹೊರ ಬಂದಿದ್ದಾರೆ.
ಈ ಭೂಕಂಪನದ ತೀವ್ರತೆಗೆ ಕೇಂದ್ರ ಮಯನ್ಮಾರ್‌ನಿಂದ ಸಾಕಷ್ಟು ದೂರದಲ್ಲಿರುವ ಉತ್ತರ ಥಾಯ್ಲೆಂಡ್‌ನಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. ಹೀಗಾಗಿ, ಬ್ಯಾಂಕಾಕ್‌ನ ಕೆಲವು ಮೆಟ್ರೊ ರೈಲು ಹಾಗೂ ರೈಲು ಸೇವೆಗಳನ್ನು ಅಮಾನತುಗೊಳಿಸಲಾಗಿದೆ.
ಭೂಕಂಪನದ ಬೆನ್ನಿಗೇ ತುರ್ತು ಸಭೆಯನ್ನು ಕರೆದಿರುವ ಥಾಯ್ಲೆಂಡ್ ಪ್ರಧಾನಿ ಪೇಟಾಂಗ್ಟರ್ನ್ ಶಿನವಾತ್ರ ರಾಜಧಾನಿ ಬ್ಯಾಂಕಾಕ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.