ಭೂಕಂಪದಿಂದ ತತ್ತರಿಸಿದ ಮ್ಯಾನ್ಮಾರ್‌ ಗೆ ಪರಿಹಾರ ಸಜ್ಜುಗೊಳಿಸಿದ ವಿಶ್ವಸಂಸ್ಥೆ

Update: 2025-03-29 22:12 IST
ಭೂಕಂಪದಿಂದ ತತ್ತರಿಸಿದ ಮ್ಯಾನ್ಮಾರ್‌ ಗೆ ಪರಿಹಾರ ಸಜ್ಜುಗೊಳಿಸಿದ ವಿಶ್ವಸಂಸ್ಥೆ

 PC : PTI

  • whatsapp icon

ವಿಶ್ವಸಂಸ್ಥೆ: ಶುಕ್ರವಾರ ಪ್ರಬಲ ಭೂಕಂಪದಿಂದ ತತ್ತರಿಸಿರುವ ಮ್ಯಾನ್ಮಾರ್‌ ಗೆ ವಿಶ್ವಸಂಸ್ಥೆಯು ಪರಿಹಾರ ಸಾಮಾಗ್ರಿಗಳನ್ನು ಸಜ್ಜುಗೊಳಿಸಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಹೇಳಿದ್ದಾರೆ.

ಮ್ಯಾನ್ಮಾರ್ ಸರಕಾರ ಅಂತರಾಷ್ಟ್ರೀಯ ನೆರವಿಗೆ ಮನವಿ ಮಾಡಿದ್ದು ಆ ದೇಶದ ಜನತೆಗೆ ನೆರವಾಗಲು ಈ ವಲಯದಲ್ಲಿ ನಮ್ಮ ಸಂಪನ್ಮೂಲಗಳನ್ನು ಪೂರ್ಣವಾಗಿ ಸಜ್ಜುಗೊಳಿಸುವ ನಿಟ್ಟಿನಲ್ಲಿ ಮ್ಯಾನ್ಮಾರ್‌ ನಲ್ಲಿರುವ ನಮ್ಮ ತಂಡದ ಜತೆ ಸಂಪರ್ಕದಲ್ಲಿದ್ದೇವೆ. ಭೂಕಂಪ ಇತರ ದೇಶಗಳ ಮೇಲೆಯೂ ಪರಿಣಾಮ ಬೀರಿದೆ. ಆದರೆ ಭೂಕಂಪದ ಕೇಂದ್ರ ಬಿಂದು ಮ್ಯಾನ್ಮಾರ್‌ ನಲ್ಲಿತ್ತು ಮತ್ತು ಈಗಿನ ಪರಿಸ್ಥಿತಿಯಲ್ಲಿ ಮ್ಯಾನ್ಮಾರ್ ಅತ್ಯಂತ ದುರ್ಬಲ ದೇಶವಾಗಿದ್ದು ಪರಿಹಾರ ಕಾರ್ಯಕ್ಕೆ 5 ದಶಲಕ್ಷ ಡಾಲರ್‌ ಗಳನ್ನು ನಿಗದಿಗೊಳಿಸಲಾಗಿದೆ ' ಎಂದವರು ಹೇಳಿದ್ದಾರೆ.

ಈ ಮಧ್ಯೆ, ಚೀನಾವು ಭೂಕಂಪ ಶೋಧಕಗಳು, ಡ್ರೋನ್‌ ಗಳ ಸಹಿತ 37 ಸದಸ್ಯರ ರಕ್ಷಣಾ ತಂಡವನ್ನು ಯಾಂಗಾನ್‍ಗೆ ರವಾನಿಸಿದೆ. ರಶ್ಯವು 120 ರಕ್ಷಣಾ ಕಾರ್ಯಕರ್ತರು ಹಾಗೂ ನೆರವನ್ನು ಹೊತ್ತ ಎರಡು ವಿಮಾನಗಳನ್ನು ರವಾನಿಸಿದೆ. ಭಾರತವು ಡೇರೆಗಳು, ಮಲಗುವ ಚೀಲಗಳು, ಕಂಬಳಿಗಳು, ಸಿದ್ಧ ಆಹಾರ, ನೀರಿನ ಶುದ್ಧೀಕರಣ ವ್ಯವಸ್ಥೆ, ಸೌರ ದೀಪಗಳು, ಜನರೇಟರ್‌ ಗಳು ಮತ್ತು ಅಗತ್ಯ ಔಷಧಿಗಳನ್ನು ಒಳಗೊಂಡ 15 ಟನ್‌ ಗಳಷ್ಟು ಸಾಮಾಗ್ರಿಗಳನ್ನು ಹಾಗೂ ರಕ್ಷಣಾ ತಂಡವನ್ನು ಮ್ಯಾನ್ಮಾರ್‌ ಗೆ ರವಾನಿಸಿದೆ. ರವಿವಾರ 50 ರಕ್ಷಣಾ ಸಿಬ್ಬಂದಿಗಳನ್ನು ಕಳುಹಿಸುವುದಾಗಿ ಮಲೇಶ್ಯಾ ಹೇಳಿದೆ. ಅಮೆರಿಕವೂ ತುರ್ತು ನೆರವು ಒದಗಿಸಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News