ಅಮೆರಿಕ: ಟರ್ಕಿ ವಿದ್ಯಾರ್ಥಿನಿಯ ಗಡೀಪಾರಿಗೆ ನ್ಯಾಯಾಧೀಶರ ತಡೆ
Update: 2025-03-29 22:17 IST

Photo - AP
ವಾಷಿಂಗ್ಟನ್: ಅಮೆರಿಕದ ಮ್ಯಾಸಚೂಸೆಟ್ಸ್‍ನ ಟಫ್ಟ್ಸ್ ವಿಶ್ವವಿದ್ಯಾಲಯದ ಡಾಕ್ಟರೇಟ್ ವಿದ್ಯಾರ್ಥಿನಿಯಾಗಿದ್ದ ಟರ್ಕಿ ಪ್ರಜೆಯನ್ನು ಗಡೀಪಾರು ಮಾಡುವುದಕ್ಕೆ ಮ್ಯಾಸಚೂಸೆಟ್ಟ್‍ನ ಫೆಡರಲ್ ನ್ಯಾಯಾಧೀಶರು ತಾತ್ಕಾಲಿಕವಾಗಿ ತಡೆಯಾಜ್ಞೆ ನೀಡಿರುವುದಾಗಿ ವರದಿಯಾಗಿದೆ.
ಗಾಝಾದಲ್ಲಿ ಇಸ್ರೇಲ್ ನ ಯುದ್ಧವನ್ನು ಟೀಕಿಸಿದ ಹಾಗೂ ಫೆಲಸ್ತೀನೀಯರನ್ನು ಬೆಂಬಲಿಸಿದ ಆರೋಪದಲ್ಲಿ ರುಮೆಯ್ಸಾ ಓಜ್ಟರ್ಕ್ ಎಂಬ ವಿದ್ಯಾರ್ಥಿನಿಯನ್ನು ಅಮೆರಿಕದ ವಲಸೆ ಇಲಾಖೆಯ ಅಧಿಕಾರಿಗಳು ಈ ವಾರ ಬಂಧಿಸಿದ್ದರು. ಅಮೆರಿಕದ ಸರಕಾರ ವಿರೋಧಿಸುವ ಹಮಾಸ್ ಅನ್ನು ಬೆಂಬಲಿಸುವ ಚಟುವಟಿಕೆಗಳಲ್ಲಿ ರುಮೈಸಾ ನಿರತರಾಗಿದ್ದಾರೆ' ಎಂದು ಅಮೆರಿಕದ ದೇಶೀಯ ಭದ್ರತಾ ಇಲಾಖೆ ಹೇಳಿದೆ.