ಅಫ್ಘಾನಿಸ್ತಾನ | ಗುಂಡಿನ ದಾಳಿಯಲ್ಲಿ 15 ಮಂದಿ ಮೃತ್ಯು

Update: 2024-09-13 16:25 GMT

ಸಾಂದರ್ಭಿಕ ಚಿತ್ರ

ಕಾಬೂಲ್ : ಮಧ್ಯ ಅಫ್ಘಾನಿಸ್ತಾನದಲ್ಲಿ ಗುರುತಿಸಲಾಗದ ಶಸ್ತ್ರಸಜ್ಜಿತ ವ್ಯಕ್ತಿಗಳು ನಡೆಸಿದ ಗುಂಡಿನ ದಾಳಿಯಲ್ಲಿ 15 ನಾಗರಿಕರು ಮೃತಪಟ್ಟಿದ್ದು ಇತರ 6 ಮಂದಿ ಗಾಯಗೊಂಡಿರುವುದಾಗಿ ಆಂತರಿಕ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

ಇರಾಕ್‍ನ ಕರ್ಬಾಲಾದಿಂದ ಹಿಂತಿರುಗುತ್ತಿದ್ದ ಯಾತ್ರಿಗಳನ್ನು ಸ್ವಾಗತಿಸಲು ಡೇಕುಂಡಿ ಪ್ರಾಂತದ ನಿಲಿ ನಗರದಲ್ಲಿ ಸೇರಿದ್ದ ಗುಂಪಿನ ಮೇಲೆ ಬಂದೂಕುಧಾರಿಗಳು ದಾಳಿ ನಡೆಸಿದ್ದಾರೆ. ಐಸಿಸ್ ಸಂಘಟನೆ ದಾಳಿಯ ಹೊಣೆ ವಹಿಸಿಕೊಂಡಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಟೊಲೊ ನ್ಯೂಸ್ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News