ಔಷಧೀಯ ಡ್ರಿಪ್ ಬದಲು ನೀರು ಹಾಕಿದ ನರ್ಸ್: 10 ಮಂದಿ ಮೃತ್ಯು

Update: 2024-01-06 18:39 GMT

Photo : indiatoday

ವಾಷಿಂಗ್ಟನ್: ನೋವು ನಿವಾರಕ ಫೆಂಟಾನಿಲ್ ಐವಿ ಎಂಬ ಔಷಧೀಯ ಡ್ರಿಪ್ಸ್ ಬದಲು ಅದರ ಪ್ಯಾಕೆಟ್ ನಲ್ಲಿ ನಲ್ಲಿ ನೀರನ್ನು ತುಂಬಿಸಿ ರೋಗಿಗಳಿಗೆ ನೀಡಿದ ಕಾರಣ 10 ರೋಗಿಗಳು ಮೃತಪಟ್ಟ ಘಟನೆ ಅಮೆರಿಕದ ಒರೆಗಾನ್ ರಾಜ್ಯದ ಆಸ್ಪತ್ರೆಯಲ್ಲಿ ನಡೆದಿದೆ.

ಒರೆಗಾನ್ನ ಮೆಡ್ಫೋರ್ಡ್ ನಗರದ ` ಅಸ್ಯಾಂಟ್ ರೋಗ್ ರೀಜನಲ್ ಮೆಡಿಕಲ್ ಸೆಂಟರ್'ನಲ್ಲಿ ನರ್ಸ್ ಒಬ್ಬರು ರೋಗಿಗಳಿಗೆ ಸೂಚಿಸಲಾಗಿದ್ದ ಔಷಧಿಯನ್ನು ಕದ್ದು ಅದರ ಬದಲು ನೀರು ತುಂಬಿದ್ದ ಪ್ಯಾಕೆಟ್ ಅನ್ನು ಇಟ್ಟಿದ್ದಾಳೆ. ಇದನ್ನು ತಿಳಿಯದ ಇತರ ವೈದ್ಯರು ಆ ನೀರನ್ನೇ ಡ್ರಿಪ್ಸ್ ರೂಪದಲ್ಲಿ ರೋಗಿಗಳಿಗೆ ನೀಡಿದ್ದಾರೆ. ಕಲುಷಿತ ನೀರು ದೇಹದಲ್ಲಿ ಸೋಂಕಿಗೆ ಕಾರಣವಾಗಿ ಕನಿಷ್ಠ 10 ರೋಗಿಗಳು ಸಾವನ್ನಪ್ಪಿರುವ ಸಾಧ್ಯತೆಯಿದೆ. ಆದರೆ ರೋಗಿಗಳ ಸಾವಿಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News