ರಾಷ್ಟ್ರೀಯ ಹಿತಾಸಕ್ತಿಯ ಆಧಾರದಲ್ಲಿ ದಾಳಿ : ನೆತನ್ಯಾಹು

Update: 2024-10-27 16:16 GMT

ಬೆಂಜಮಿನ್ ನೆತನ್ಯಾಹು | PC : PTI 

ಟೆಲ್‍ಅವೀವ್ : ಶನಿವಾರ ಬೆಳಿಗ್ಗೆ ಇರಾನ್‍ ನ ಮಿಲಿಟರಿ ನೆಲೆಗಳ ಮೇಲೆ ನಡೆದಿರುವ ದಾಳಿಯನ್ನು ರಾಷ್ಟ್ರೀಯ ಹಿತಾಸಕ್ತಿಯ ಆಧಾರದಲ್ಲಿ ನಿರ್ಧರಿಸಲಾಗಿತ್ತು. ಅಮೆರಿಕದ ಸೂಚನೆಯ ಮೇರೆಗೆ ಅಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ನಾವು ಪ್ರತಿದಾಳಿ ನಡೆಸುವುದಾಗಿ ಭರವಸೆ ನೀಡಿದ್ದೆವು ಮತ್ತು ಶನಿವಾರ ದಾಳಿ ನಡೆಸಿದ್ದೇವೆ. ಇರಾನ್‍ ನ ಮೇಲಿನ ವಾಯುದಾಳಿಯು ಅತ್ಯಂತ ನಿಖರ ಮತ್ತು ಶಕ್ತಿಯುತವಾಗಿತ್ತು ಮತ್ತು ಅದರ ಎಲ್ಲಾ ಉದ್ದೇಶಗಳನ್ನು ಸಾಧಿಸಿದೆ ಎಂದು ನೆತನ್ಯಾಹು ಪ್ರತಿಪಾದಿಸಿದ್ದಾರೆ.

ನಿರ್ಣಾಯಕ ಸಂದರ್ಭಗಳಲ್ಲಿ ಮತ್ತು ಪರಸ್ಪರ ಸಹಕಾರದ ವಿಷಯಗಳಲ್ಲಿ ಅಮೆರಿಕವು ಇಸ್ರೇಲ್‍ ನ ನಿಜವಾದ ಮಿತ್ರ ಎಂದು ಇಸ್ರೇಲ್ ಅಧ್ಯಕ್ಷ ಇಸಾಕ್ ಹೆಝಾಗ್ ಶ್ಲಾಘಿಸಿದ್ದಾರೆ. ಇರಾನ್‍ ನ ಮೇಲೆ ಇಸ್ರೇಲ್ ನಡೆಸಿರುವ ದಾಳಿಯನ್ನು ಶ್ಲಾಘಿಸಿದ ಹೆಝಾಗ್ ` ನಿಜವಾದ ಮಿತ್ರನಾಗಿರುವುದಕ್ಕೆ ಮತ್ತು ಬಹಿರಂಗ ಹಾಗೂ ರಹಸ್ಯ ಸಹಕಾರಕ್ಕಾಗಿ ನಾನು ವಿಶೇಷವಾಗಿ ಅಮೆರಿಕಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ' ಎಂದು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News