ಏಡನ್ ಕೊಲ್ಲಿಯಲ್ಲಿ ಹಡಗಿನ ಮೇಲೆ ದಾಳಿ

Update: 2024-07-09 16:05 GMT

ಸಾಂದರ್ಭಿಕ ಚಿತ್ರ | PC : NDTV 

 

ಸನಾ : ಮಂಗಳವಾರ ಏಡನ್ ಕೊಲ್ಲಿಯ ಮೂಲಕ ಸಾಗುತ್ತಿದ್ದ ಹಡಗಿನ ಮೇಲೆ ದಾಳಿ ನಡೆದಿದ್ದು ಯೆಮನ್ ಮೂಲದ ಹೌದಿ ಸಶಸ್ತ್ರ ಹೋರಾಟಗಾರರ ಗುಂಪು ದಾಳಿ ನಡೆಸಿರುವುದಾಗಿ ಶಂಕಿಸಲಾಗಿದೆ.

ಒಮನ್ನರ ಗಡಿಭಾಗದ ಬಳಿ, ಯೆಮನ್ನರ ನಿಷ್ಟೂನ್ ಕರಾವಳಿ ಬಳಿ ಸಾಗುತ್ತಿದ್ದ ಹಡಗಿನ ಬಳಿ ಭಾರೀ ಸ್ಫೋಟ ಸಂಭವಿಸಿದೆ. ದಾಳಿಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಮತ್ತು ಹಡಗಿಗೂ ಹಾನಿಯಾಗಿಲ್ಲ ಎಂದು ಹಡಗಿನ ಕ್ಯಾಪ್ಟನ್ ಹೇಳಿರುವುದಾಗಿ ಬ್ರಿಟಿಷ್ ಮಿಲಿಟರಿಯ ಕಡಲ ವ್ಯಾಪಾರ ಕಾರ್ಯಾಚರಣಾ ಕೇಂದ್ರ ಯುಕೆಎಂಟಿಒ ಹೇಳಿದೆ.

ದಾಳಿಯ ಹೊಣೆಯನ್ನು ಯಾರೂ ವಹಿಸಿಲ್ಲ, ಆದರೆ ಹೌದಿಗಳು ನಡೆಸಿರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿಕೆ ತಿಳಿಸಿದೆ. ಗಾಝಾ ಯುದ್ಧದಲ್ಲಿ ಹಮಾಸ್ ಬೆಂಬಲಿಸಿ ಕಳೆದ ನವೆಂಬರ್ ನಿಂದ ಕೆಂಪು ಸಮುದ್ರದಲ್ಲಿ ಸಾಗುವ 60ಕ್ಕೂ ಅಧಿಕ ಹಡಗುಗಳ ಮೇಲೆ (ಇಸ್ರೇಲ್ಗೆ ಅಥವಾ ಇಸ್ರೇಲ್ ಸಂಸ್ಥೆಗೆ ಸಂಬಂಧಿಸಿದ) ಹೌದಿಗಳು ದಾಳಿ ನಡೆಸಿದ್ದು ಇದುವರೆಗೆ 4 ನಾವಿಕರು ಸಾವನ್ನಪ್ಪಿದ್ದಾರೆ. ಒಂದು ಹಡಗನ್ನು ಹೌದಿಗಳು ವಶಕ್ಕೆ ಪಡೆದಿದ್ದು ಎರಡನ್ನು ಮುಳುಗಿಸಿದ್ದಾರೆ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News