ಹಿಜ್ಬುಲ್ಲಾ ಮುಖ್ಯಸ್ಥರಾಗಿ ಹಾಶಿಮ್‌ ಶಫೀಯುದ್ದೀನ್‌ ನೇಮಕ

Update: 2024-09-29 16:32 GMT

ಹಾಶಿಮ್‌ ಶಫೀಯುದ್ದೀನ್ | PC : PTI

ಬೈರುತ್ : ಹಸನ್ ನಸ್ರುಲ್ಲಾ ಸ್ಥಾನದಲ್ಲಿ ಹಿಜ್ಬುಲ್ಲಾ ಸಶಸ್ತ್ರ ಹೋರಾಟಗಾರರ ಗುಂಪಿನ ಮುಖ್ಯಸ್ಥರಾಗಿ   ಹಾಶಿಮ್‌ ಶಫೀಯುದ್ದೀನ್ ರನ್ನು ನೇಮಕಗೊಳಿಸಲಾಗಿದೆ ಎಂದು ವರದಿಯಾಗಿದೆ.

ಸಫಿದ್ದೀನ್ ಇಸ್ರೇಲ್ ಬಾಂಬ್ ದಾಳಿಯಲ್ಲಿ ಹತರಾದ ನಸ್ರುಲ್ಲಾರ ಸೋದರ ಸಂಬಂಧಿ. ಲೆಬನಾನ್‍ನಲ್ಲಿ ಶನಿವಾರ ಇಸ್ರೇಲ್‍ನ ಬಾಂಬ್‍ದಾಳಿಯಲ್ಲಿ ಶಫೀಯುದ್ದೀನ್ ಕೂಡಾ ಹತರಾಗಿರುವುದಾಗಿ ಶನಿವಾರ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಈ ವರದಿ ಸತ್ಯವಲ್ಲ ಎಂದು ಹಿಜ್ಬುಲ್ಲಾ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ. 1990ರಿಂದಲೂ ನಸ್ರುಲ್ಲಾ ಅವರ ಉತ್ತರಾಧಿಕಾರಿ ಎಂದೇ ಬಿಂಬಿಸಲ್ಪಟ್ಟಿದ್ದ ಶಫೀಯುದ್ದೀನ್ 2017ರಲ್ಲಿ ಭಯೋತ್ಪಾದಕ ಎಂದು ಅಮೆರಿಕ ಗೊತ್ತುಪಡಿಸಿದೆ.

ಹತ್ಯೆಗೀಡಾದ ಇರಾನ್‍ನ ಮಿಲಿಟರಿ ಜನರಲ್ ಕಾಸಿಂ ಸುಲೇಮಾನಿಯ ಮಗಳು ಝೈನಾಬ್ ಸುಲೇಮಾನಿಯ ಮಾವನಾಗಿರುವ ಶಫೀಯುದ್ದೀನ್ ರನ್ನು ಸೌದಿ ಅರೆಬಿಯಾ ಕೂಡಾ ಕಪ್ಪುಪಟ್ಟಿಗೆ ಸೇರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News