ನಾನು ಜೈಲಿನಲ್ಲಿದ್ದಾಗ ಮನಮೋಹನ್ ಸಿಂಗ್ ನನ್ನ ಮಕ್ಕಳಿಗೆ ಸ್ಕಾಲರ್ ಶಿಪ್ ನೀಡಿದ್ದರು: ಮಲೇಶ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ
Update: 2024-12-27 16:45 GMT
ಕೌಲಲಾಂಪುರ : ಮಲೇಶ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಶುಕ್ರವಾರ ಮನಮೋಹನ್ ಸಿಂಗ್‍ಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದು , ತಾನು ಜೈಲಿನಲ್ಲಿದ್ದಾಗ ತನ್ನ ಮಕ್ಕಳಿಗೆ ಸಿಂಗ್ ಸ್ಕಾಲರ್ ಶಿಪ್ ನೀಡುವುದಾಗಿ ಹೇಳಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ಗುರುವಾರ ನಿಧನರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ `ವಿಶ್ವದ ಆರ್ಥಿಕ ದೈತ್ಯರಾಗಿ ಭಾರತ ಹೊರಹೊಮ್ಮುವಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದರು. ಅವರು ನನ್ನ ಮಿತ್ರ, ನನ್ನ ಸಹೋದರ' ಎಂದು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಿಂಗ್ ಅವರ ಪ್ರಸ್ತಾಪವನ್ನು ನಿರಾಕರಿಸಿದರೂ ಅವರ ಹೃದಯವಂತಿಕೆ ಮನಕ್ಕೆ ನಾಟಿದೆ ಎಂದು ಅನ್ವರ್ ಹೇಳಿದ್ದಾರೆ. 1999ರಿಂದ 2004ರವರೆಗೆ ಅನ್ವರ್ ಜೈಲಿನಲ್ಲಿದ್ದರು. ಈ ಸಂದರ್ಭ ಸಿಂಗ್ ಅವರು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ಮುಖಂಡರಾಗಿದ್ದರು.