`ಚೀನಾದಿಂದ ಕೋವಿಡ್ ಸೋರಿಕೆಯಾಗಿದೆ ಎಂಬ ವರದಿಯನ್ನು ಬೈಡನ್‍ರಿಂದ ಮುಚ್ಚಿಟ್ಟಿದ್ದ ಎಫ್‍ಬಿಐ : ವರದಿ
ವಾಷಿಂಗ್ಟನ್ : ಕೋವಿಡ್ ವೈರಸ್ ಚೀನಾದ ಪ್ರಯೋಗಾಲಯದಿಂದ ಸೋರಿಕೆಯಾಗಿರುವುದನ್ನು ದೃಢಪಡಿಸುವ ಪುರಾವೆಗಳು ಅಮೆರಿಕದ ರಕ್ಷಣಾ ಇಲಾಖೆ ಮತ್ತು ಸಂಶೋಧಕರ ಬಳಿ ಇದ್ದರೂ ಈ ಬಗ್ಗೆ ಮೌನ ವಹಿಸುವಂತೆ ಎಫ್‍ಬಿಐ ಸೂಚಿಸಿತ್ತು ಎಂದು ವಾಲ್‍ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಈ ಅಂಶಗಳನ್ನು 2021ರ ಆಗಸ್ಟ್ ನಲ್ಲಿ ಅಧ್ಯಕ್ಷ ಬೈಡನ್‍ಗೆ ಸಲ್ಲಿಸಿದ್ದ ವರದಿಯಲ್ಲಿ ಸೇರಿಸಿರಲಿಲ್ಲ. ವೈರಸ್ ಬಹುಷಃ ತಳೀಯವಾಗಿ ರೂಪುಗೊಂಡಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು ಎಂದು ವರದಿ ಹೇಳಿದೆ. ಕೋವಿಡ್ ಮೂಲದ ಬಗ್ಗೆ ಸಂಶೋಧನೆ ನಡೆಸಿದ್ದ ವಿಜ್ಞಾನಿಗಳಾದ ಜಾನ್ ಹರ್ದಮ್, ರಾಬರ್ಟ್ ಕಟ್ಲಿಪ್ ಮತ್ತು ಜೀನ್ ಪಾಲ್ ಕ್ರೆಟಿಯನ್ ಅವರು ಮಾನವ ಪ್ರಸರಣಕ್ಕೆ ಸಹಾಯ ಮಾಡುವ ಅಂಶಗಳು ಹೆಚ್ಚಿರುವುದನ್ನು ಪತ್ತೆಹಚ್ಚಿದ್ದರು.
2008ರ ವುಹಾನ್ ರೋಗ ಸೂಕ್ಷ್ಮಾಣುಗಳ ಅಧ್ಯಯನ ಸಂಸ್ಥೆಯ ವರದಿಯಲ್ಲೂ ಈ ತಂತ್ರದ ಬಗ್ಗೆ ವಿವರಿಸಲಾಗಿತ್ತು. 2020ರಲ್ಲಿ ವೈರಸ್ ಅನ್ನು ಅನುಕ್ರಮಗೊಳಿಸಿದ ನಂತರ ಚೀನಾದ ಮಿಲಿಟರಿ ಸಂಶೋಧಕರೊಬ್ಬರು ಕೋವಿಡ್-19 ಲಸಿಕೆ ಪೇಟೆಂಟ್‍ಗಾಗಿ ಅರ್ಜಿ ಸಲ್ಲಿಸಿದ್ದರು. ನಂತರ ನಿಗೂಢ ಸನ್ನಿವೇಶದಲ್ಲಿ ಈ ಸಂಶೋಧಕರು ಮೃತಪಟ್ಟರು. ಈ ಅಂಶಗಳನ್ನು ಎಫ್‍ಬಿಐ ಅಧಿಕಾರಿಗಳು ಅಮೆರಿಕ ಅಧ್ಯಕ್ಷ ಬೈಡನ್‍ಗೆ ಒಪ್ಪಿಸಿದ ವರದಿಯಲ್ಲಿ ಸೇರಿಸಿರಲಿಲ್ಲ. ಸಂಶೋಧಕರು ತಮ್ಮ ವಿಶ್ಲೇಷಣೆಯನ್ನು ಅಮೆರಿಕ ಕಾಂಗ್ರೆಸ್ ಮತ್ತು ಎಫ್‍ಬಿಐ ಜತೆ ಹಂಚಿಕೊಳ್ಳುವುದನ್ನು ನಿರ್ಬಂಧಿಸಲಾಗಿತ್ತು ಎಂದು `ವಾಲ್‍ಸ್ಟ್ರೀಟ್ ಜರ್ನಲ್' ವರದಿ ಮಾಡಿದೆ.
ಅಧ್ಯಕ್ಷರಿಗೆ ಸಲ್ಲಿಸಲಾದ ವರದಿಯಲ್ಲಿ ಪಾರದರ್ಶಕತೆಯ ಕೊರತೆಯಿದೆ. ಏನಾಯಿತು ಎಂಬ ಬಗ್ಗೆ ಮರು ಪರಿಶೀಲಿಸಬೇಕಾಗಿದೆ ಎಂದು ಎಫ್‍ಬಿಐ ವಿಜ್ಞಾನಿ ಜೇಸನ್ ಬನ್ನಾನ್ ಆಗ್ರಹಿಸಿದ್ದಾರೆ.
`ಕೋವಿಡ್ ವೈರಸ್ ಬಾವಲಿಗಳಿಂದ ಮನುಷ್ಯರಿಗೆ ಮತ್ತೊಂದು ಪ್ರಾಣಿಯ ಮೂಲಕ ಹರಡುತ್ತದೆ' ಎಂದು 2021ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಸಿದ್ದ ವರದಿಯಲ್ಲಿ ಚೀನಾ ಉಲ್ಲೇಖಿಸಿದೆ.