ಬಾಹ್ಯಾಕಾಶ ತಲುಪಿದ ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ರನ್ನು ಕರೆತರಲಿರುವ ಸ್ಪೇಸ್ಎಕ್ಸ್ ನೌಕೆ

Update: 2024-09-30 07:03 GMT

Screengrab:X/NASA

ಹೊಸದಿಲ್ಲಿ: ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ವಾಪಾಸ್ಸು ಕರೆತರಲು ಗೊತ್ತುಪಡಿಸಿದ ಸ್ಪೇಸ್ಎಕ್ಸ್ ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ಬಾಹ್ಯಾಕಾಶ ಕಕ್ಷೆಯಲ್ಲಿ ಲ್ಯಾಂಡ್ ಆಗಿದೆ ಎಂದು ವರದಿಯಾಗಿದೆ.

ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮೊದಲು ಒಂದು ವಾರ ಬಾಹ್ಯಾಕಾಶದಲ್ಲಿರಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಸ್ಟಾರ್ಲೈನರ್ ನಲ್ಲಿನ ತಾಂತ್ರಿಕ ತೊಂದರೆಗಳಿಂದ ಅವರು ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲೇ ಉಳಿದುಕೊಂಡಿದ್ದರು.

ಕ್ರ್ಯೂ-9 ಮಿಷನ್ ನ ಭಾಗವಾಗಿರುವ ಬಾಹ್ಯಾಕಾಶ ನೌಕೆ ಫ್ಲೋರಿಡಾದ ಕೇಪ್ ಕೆನವೆರಲ್ ಬಾಹ್ಯಾಕಾಶ ಕೇಂದ್ರದಿಂದ ಶನಿವಾರ ಮಧ್ಯಾಹ್ನ ಸ್ಥಳೀಯ ಕಾಲಮಾನ 1:17 ಗಂಟೆಗೆ ಟೇಕಾಫ್ ಆಗಿದೆ. ಅದರಲ್ಲಿ ನಾಸಾದ ಗಗನಯಾತ್ರಿ ನಿಕ್ ಹೇಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೊರ್ಬುನೊವ್ ಅವರಿದ್ದರು.

ಸ್ಪೇಸೆಕ್ಸ್ ಬಾಹ್ಯಾಕಾಶ ನೌಕೆ ರವಿವಾರ 5:30ಕ್ಕೆ ಬಾಹ್ಯಾಕಾಶದಲ್ಲಿ ಉಳಿದು ಕೊಂಡಿರುವ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಜೊತೆ ಸಂಪರ್ಕವನ್ನು ಸಾಧಿಸಿದೆ. ಸುನೀತಾ ವಿಲಿಯಮ್ಸ್ ಅವರು ಬಾಹ್ಯಾಕಾಶಕ್ಕೆ ಬಂದ ಹೊಸ ಒಡನಾಡಿಗಳಿಗೆ ಸ್ವಾಗತವನ್ನು ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News