ಬಾಂಗ್ಲಾ | ಬಂಧಿತ ಹಿಂದೂ ನಾಯಕರ ಬ್ಯಾಂಕ್ ಖಾತೆ ಸ್ಥಗಿತ

Update: 2024-11-29 16:27 GMT

PC  : PTI/AP

ಢಾಕಾ : ಇಸ್ಕಾನ್‍ನ ಮಾಜಿ ಸದಸ್ಯ ಚಿನ್ಮಯ್ ಕೃಷ್ಣದಾಸ್ ಸೇರಿದಂತೆ ಇಸ್ಕಾನ್ ಜತೆ ಸಂಪರ್ಕವಿರುವ 17 ಹಿಂದೂ ನಾಯಕರ ಬ್ಯಾಂಕ್ ಖಾತೆಯನ್ನು 30 ದಿನಗಳವರೆಗೆ ಸ್ಥಗಿತ(ಸ್ಥಂಭನ)ಗೊಳಿಸುವಂತೆ ಬಾಂಗ್ಲಾದೇಶದ ಅಧಿಕಾರಿಗಳು ಆದೇಶಿಸಿರುವುದಾಗಿ ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ.

17 ಆರೋಪಿಗಳು ಹಾಗೂ ಇವರಿಗೆ ಸಂಬಂಧಿಸಿದ ಬ್ಯಾಂಕ್ ವ್ಯವಹಾರಗಳ ಎಲ್ಲಾ ಮಾಹಿತಿಯನ್ನೂ ಮುಂದಿನ 3 ವ್ಯವಹಾರ ದಿನಗಳೊಳಗೆ ಸಲ್ಲಿಸುವಂತೆ ಬಾಂಗ್ಲಾದೇಶದ ಸೆಂಟ್ರಲ್ ಬ್ಯಾಂಕ್‍ನ ನಿಯಂತ್ರಣದಲ್ಲಿರುವ ಹಣಕಾಸು ಗುಪ್ತಚರ ಏಜೆನ್ಸಿ ಎಲ್ಲಾ ಬ್ಯಾಂಕ್‍ಗಳು ಹಾಗೂ ಹಣಕಾಸು ಸಂಸ್ಥೆಗಳಿಗೆ ಸೂಚಿಸಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News