ಇಸ್ರೇಲ್ ಗೆ ಪ್ರಯಾಣ ನಿಷೇಧಿಸಿದ ಬಾಂಗ್ಲಾ
Update: 2025-04-13 23:37 IST

Photo Credit : AFP
ಢಾಕ: ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನ ಕ್ರಮಗಳ ವಿರುದ್ಧ ಬಾಂಗ್ಲಾದೇಶದಲ್ಲಿ ಸಾರ್ವಜನಿಕರ ಆಕ್ರೋಶ ಹೆಚ್ಚುತ್ತಿರುವಂತೆಯೇ ಮುಹಮ್ಮದ್ ಯೂನಿಸ್ ನೇತೃತ್ವದ ಮಧ್ಯಂತರ ಸರಕಾರ ಬಾಂಗ್ಲಾ ಪ್ರಜೆಗಳು ಇಸ್ರೇಲ್ ಗೆ ಪ್ರಯಾಣಿಸುವುದನ್ನು ನಿಷೇಧಿಸಿದೆ.
`ಇಸ್ರೇಲ್ ಹೊರತುಪಡಿಸಿ' ಎಂಬ ಉಲ್ಲೇಖವನ್ನು ಬಾಂಗ್ಲಾ ಸರಕಾರ ತನ್ನ ಪಾಸ್‌ಪೋರ್ಟ್ ಗಳನ್ನು ಮರುಮುದ್ರಿಸಿದೆ. ಶೇಖ್ ಹಸೀನಾ ಸರಕಾರ 2021ರಲ್ಲಿ ಈ ಉಲ್ಲೇಖವನ್ನು ಪಾಸ್‌ಪೋರ್ಟ್ ನಿಂದ ತೆಗೆದು ಹಾಕಿದ್ದರು.
'ಇಸ್ರೇಲ್ ಹೊರತುಪಡಿಸಿ ವಿಶ್ವದ ಇತರ ಎಲ್ಲಾ ದೇಶಗಳಲ್ಲೂ ಈ ಪಾಸ್‍ಪೋರ್ಟ್ ಮಾನ್ಯವಾಗಿದೆ' ಎಂಬ ಉಲ್ಲೇಖವನ್ನು ಮರು ಮುದ್ರಿಸುವಂತೆ ಬಾಂಗ್ಲಾದ ಗೃಹ ಸಚಿವಾಲಯ ಪಾಸ್‍ಪೋರ್ಟ್ ಮತ್ತು ವಲಸೆ ಇಲಾಖೆಗೆ ಸೂಚಿಸಿದೆ ಎಂದು ಸರ್ಕಾರಿ ಸ್ವಾಮ್ಯದ ಬಿ ಎಸ್ ಎಸ್ ಸುದ್ದಿಸಂಸ್ಥೆ ವರದಿ ಮಾಡಿದೆ.