ಉಕ್ರೇನ್‌ಗೆ ಶಸ್ತ್ರಾಸ್ತ್ರ ನೆರವು ವಿಳಂಬ: ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ ಬೈಡನ್
ಪ್ಯಾರಿಸ್ : ಉಕ್ರೇನ್‌ಗೆ ಅಮೆರಿಕ ನೀಡುವ ಮಿಲಿಟರಿ ನೆರವಿನ ಪ್ಯಾಕೇಜ್ಗೆ ಅಮೆರಿಕದ ಸಂಸತ್ ಅನುಮೋದನೆ ನೀಡಲು ವಿಳಂಬಿಸಿದ್ದರಿಂದ ಯುದ್ಧರಂಗದಲ್ಲಿ ರಶ್ಯ ಮುನ್ನಡೆ ಸಾಧಿಸುವಂತಾಗಿದ್ದು, ಇದಕ್ಕಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿಯಲ್ಲಿ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ.
ಪ್ಯಾರಿಸ್ನಲ್ಲಿ ಉಭಯ ಮುಖಂಡರ ನಡುವಿನ ಸಭೆಯಲ್ಲಿ ಮಾತನಾಡಿದ ಬೈಡನ್ ` ನೆರವಿನ ಪ್ಯಾಕೇಜ್ನ ವಿಷಯದಲ್ಲಿ ಏನಾಗಲಿದೆ ಎಂದು ತಿಳಿಯದ ಆ ವಾರಗಳಿಗಾಗಿ ನಾನು ಕ್ಷಮೆ ಯಾಚಿಸುತ್ತೇನೆ. ಆದರೂ, ಅಮೆರಿಕದ ಜನತೆ ಸುದೀರ್ಘ ಕಾಲದಿಂದಲೂ ಉಕ್ರೇನ್ ಪರವಾಗಿಯೇ ಇದ್ದಾರೆ' ಎಂದರು. ಉಕ್ರೇನ್ಗೆ ಬೈಡನ್ ಘೋಷಿಸಿದ್ದ 61 ಶತಕೋಟಿ ಡಾಲರ್ ಮೊತ್ತದ ಶಸ್ತ್ರಾಸ್ತ್ರ ನೆರವಿನ ಪ್ಯಾಕೇಜ್ ಅನ್ನು ಸುಮಾರು 6 ತಿಂಗಳು ಸಂಸತ್ನಲ್ಲಿ ರಿಪಬ್ಲಿಕನ್ನರು ತಡೆಹಿಡಿದಿದ್ದರು. ಈ ಸಂದರ್ಭ ಮಾತನಾಡಿದ ಝೆಲೆನ್ಸ್ಕಿ `ರಶ್ಯದ ಆಕ್ರಮಣದ ಎದುರು ದೇಶದ ರಕ್ಷಣಾ ಸಾಮಥ್ರ್ಯವನ್ನು ಬಲಪಡಿಸಲು ಅಮೆರಿಕನ್ನರ ಬೆಂಬಲದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಸತ್ನ ಎಲ್ಲಾ ಸದಸ್ಯರೂ ಕೈಜೋಡಿಸಿರುವುದಕ್ಕೆ ಧನ್ಯವಾದಗಳು. ಅಮೆರಿಕ ಎರಡನೇ ವಿಶ್ವಯುದ್ಧದಲ್ಲಿ ಯಾವ ರೀತಿ ಮಾನವರ ಪ್ರಾಣವನ್ನು, ಯುರೋಪ್ ಅನ್ನು ರಕ್ಷಿಸಿದೆಯೋ ಅದೇ ರೀತಿ ಈಗ ಉಕ್ರೇನ್ನ ರಕ್ಷಣೆಗೆ ಮುಂದಾಗಿದೆ' ಎಂದರು.